Mandatory Credit: Photo by Stephen Morrison/Epa/REX/Shutterstock (7755619v) Chinese Actor Chow Yun Fat Listens to a Question During a Press Conference For the Movie 'The Last Tycoon' at Screen Singapore in Singapore 04 December 2012 Singapore Singapore Singapore Cinema - Dec 2012

ಬೀಜಿಂಗ್: ಚೀನದ ಪ್ರಸಿದ್ಧ ನಟ ಚಾವೊ ಯೆನ್ ಫೆಟ್ ತನ್ನ ಸಿನೆಮಾಗಳಿಗಾಗಿ ಸುದ್ದಿಯಲ್ಲಿರುವವರು. ಚೀನ ಸಿನೆಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಅವರಿಗಿದೆ. ಹಾಲಿವುಡ್ ಸಿನೆಮಾಗಳಲ್ಲಿಯೂ ನಟಿಸಿದ್ದಾರೆ. ಈಗ ಅವರು ತಿಂಗಳಿಗೆ ನೂರು ಡಾಲರ್‍ನಲ್ಲಿ ಜೀವನ ನಡೆಸಿ ಬಾಕಿಯುಳಿಯುವ ಸಂಪತ್ತನ್ನು ಸಾಯುವ ವೇಳೆ ದಾನ ಮಾಡಲು ನಿರ್ಧರಿಸುವ ಮೂಲಕ ಸುದ್ದಿಯಾಗಿದ್ದಾರೆ.

ಟೆಲಿಗ್ರಾಫ್ ವರದಿಯ ಪ್ರಕಾರ ಚಾವೊ ತನ್ನ ಇಡಿ ಸಂಪಾದನೆಯನ್ನು ದಾನಕ್ಕಾಗಿ ಮೀಸಲಿಟ್ಟಿದ್ದಾರೆ. ಅವರ ಆಸ್ತಿ 714 ಮಿಲಿಯನ್ ಡಾಲರ್ ಆಗಿದ್ದು ಇದನ್ನು ಅವರು ದಾನ ಮಾಡಲು ಬಯಸಿದ್ದಾರೆ. ತನಗೆ ಸಾಮಾನ್ಯ ವ್ಯಕ್ತಿಯಂತೆ ಬದುಕುವುದು ಖುಷಿಕೊಡುತ್ತದೆ ಎಂದು ಹೇಳಿಕೊಂಡಿರುವ ಅವರು ಹಾಂಕಾಂಗ್‍ನ ಸಿನೆಮಾ ವೆಬ್‍ಸೈಟ್‍ನಲ್ಲಿ ತನ್ನ ಆಸ್ತಿಯನ್ನೆಲ್ಲ ದಾನ ಮಾಡುವ ವಿಚಾರವನ್ನು ಹಂಚಿಕೊಂಡಿದ್ದಾರೆ.

ಚಾವೊರ ಸಿನೆಮ ಕ್ರೌನಿಂಗ್ ಟೈಗರ್, ಹಿಡನ್ ಡ್ರಾಗನ್ ಮತ್ತು ಹಾರ್ಡ್ ಬಾಯಿಲ್ಡ್ ಹೆಚ್ಚು ಸುಪ್ರಸಿದ್ದವಾದವು. ಹಾಲಿವುಡ್ ನಿರ್ದೇಶಕರ ಜೊತೆಗೂ ಅವರು ಕೆಲಸ ಮಾಡಿದ್ದು, ಜಾನಿ ಡೆಪ್‍ರ ಪೈರೇಟ್ಸ್ ಆಫ್ ಕೆರಿಬಿಯನ್‍ನಲ್ಲಿ ಚೀನ ಸಮುದ್ರದ ದರೋಡೆಕೋರ ಸಾವೊ ಫೆಂಗ್‍ರ ಪಾತ್ರವನ್ನು ನಿರ್ವಹಿಸಿದ್ದರು.

ಇಷ್ಟು ಆಸ್ತಿಯಿದ್ದರೂ ಸರಳವಾಗಿ ಅವರು ಜೀವನ ನಡೆಸುವುದು ದೊಡ್ಡ ವಿಶೇಷವಾಗಿದ್ದು, ಅವರು ಹದಿನಾಲ್ಕು ಡಾಲರ್‍ನ ಶರ್ಟ್ ಧರಿಸುತ್ತಾರೆ. ಎರಡು ಡಾಲರ್ ಹೆಚ್ಚು ಬೆಲೆಯ ಚಪ್ಪಲಿ ಧರಿಸುವುದಿಲ್ಲ. ಡಿಸ್ಕೌಂಟ್ ಸ್ಟೋರ್‍ನಲ್ಲಿಯೇ ಶಾಪಿಂಗ್ ಮಾಡುತ್ತಾರೆ. ಹಳೆಯ ಬಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಪತ್ನಿ ಜೆಸ್ಮೀನ್ ಟೆನ್ ಚಾವೋ 17 ವರ್ಷಗಳಿಂದ ನೊಕಿಯದ ಒಂದ ಫೋನ್ ಹೊಂದಿದ್ದಾರೆ ಎಂದು ಹೇಳುತ್ತಾರೆ. ಅವರು ಇತ್ತೀಚೆಗೆ ಕೆಲಸದಿಂದ ನಿವೃತ್ತರಾಗಿದ್ದಾರೆ.

Leave a Reply