ಜಮ್ಮು ಮತ್ತು ಕಾಶ್ಮೀರ: ಜಮ್ಮು ಕಾಶ್ಮೀರದ ಪೊಲೀಸರೊಬ್ಬರು ವಿಕಲಚೇತನ ಬಾಲಕನೊಬ್ಬನಿಗೆ ತನ್ನ ಊಟದ ಬುತ್ತಿಯಿಂದ ಸ್ವತಃ ತಿನ್ನಿಸುವ ವೀಡಿಯೋ ಇದೀಗ ಟ್ವಿಟ್ಟರ್ ಸಹಿತ ಸಾಮಾಜಿಕ ಜಾಲಾತಾಣದಲ್ಲಿ ಸಿಕ್ಕಿದೆ . ಈ ವಿಡಿಯೋ ಸೋಮವಾರ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಅಧಿಕೃತ ಖಾತೆ ‘ವೀ ಕೇರ್ ‘ ನಿಂದ ರಾಜ್ಯ ಪೊಲೀಸರು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ನೋಡಿ ಸಾರ್ವಜನಿಕರು ಪೊಲೀಸ್ ಅಧಿಕಾರಿಯ ಮಾನವೀಯ ಸ್ಪಂದನೆಗೆ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಸಿಖ್ ಜವಾನ್ ಮುಚ್ಚಿದ ಅಂಗಡಿಯ ಮುಂದೆ ಕುಳಿತಿದ್ದ ಚಿಕ್ಕ ಹುಡುಗನಿಗೆ ತಿನ್ನಿಸಿ ಮಾನವೀಯತೆ ತೋರುತ್ತಿರುವುದನ್ನು ಕಾಣಬಹುದು. ಪುಲ್ವಾಮಾ ದಾಳಿಯಿಂದ ಬದುಕುಳಿದ ಸಿಖ್ ಜವಾನ್ ಇಕ್ಬಾಲ್ ಸಿಂಗ್, ಮಾನವೀಯತೆಗಿಂತ ಮಿಗಿಲಾದ ಧರ್ಮ ಇಲ್ಲ ಎಂದು ಹೇಳಿದ್ದಾರೆ. ವೀಡಿಯೋ:
We care. pic.twitter.com/BxNzRCko2T
— J&K Police (@JmuKmrPolice) May 13, 2019