ಈರುಳ್ಳಿಯ ದರ ಕೇಳಿದರೇನೇ ಕಣ್ಣಲ್ಲಿ ನೀರು ಬರುತ್ತದೆ ಎನ್ನುವುದೊಂದು ಸಾಮಾನ್ಯವಾದ ತಮಾಷೆಯ ಮಾತು. ಆದರೆ ವೈಜ್ಞಾನಿಕವಾಗಿ ವಿಚಾರಿಸುವುದಾದರೆ ಈರುಳ್ಳಿಯನ್ನು ಕತ್ತರಿಸಿದಾಗ ಈರುಳ್ಳಿಯೊಳಗಿನ ಕೋಶಗಳು ಕೂಡಾ ಕತ್ತರಿಸಲ್ಪಡುತ್ತವೆ ಮತ್ತು ಆ ಕೋಶಗಳು ಹೊರ ಬರುತ್ತವೆ. ಹಾಗೆ ಹೊರ ಬರುವ ಕೋಶಗಳಲ್ಲಿನ ಅನಿಲವು ಸಲ್ಫೇನಿಕ್ ಆಮ್ಲವನ್ನು ರೂಪಿಸುತ್ತದೆ. ಆಮ್ಲವು ಕಿಣ್ವಗಳೊಂದಿಗೆ ಸೇರಿಕೊಂಡಾಗ ಪ್ರೊಪನೆಥಿಯೋಲ್ ಆಕ್ಸೈಡ್ ಎನ್ನುವ ಅನಿಲವೊಂದನ್ನು ತಯಾರು ಮಾಡುತ್ತದೆ.

ಈ ಅನಿಲವು ನಮ್ಮ ಕಣ್ಣುಗಳನ್ನು ಸೋಂಕಿದಾಗ ಅದು ಕಣ್ಣಲ್ಲಿರುವ ನೀರಿನೊಂದಿಗೆ ಬೆರೆತುಸೇಲ್ಫ್ಯೂರಿಕ್ ಆಮ್ಲವನ್ನು ನಮ್ಮ ಕಣ್ಣುಗಳನ್ನು ಕುಟುಕುವಂತೆ ಮಾಡುತ್ತದೆ. ಇದರಿಂದಾಗಿ ಹೆಚ್ಚು ಕಣ್ಣೀರು ಬರುತ್ತದೆ. ಅಲ್ಲದೇ ನಮ್ಮ ಕಣ್ಣುಗಳಲ್ಲಿನ ನೀರು ಹೆಚ್ಚು ಆಮ್ಲವನ್ನು ಉತ್ಪಾದಿಸುತ್ತದೆ. ಇದರಿಂದಾಗಿ ಕಣ್ಣು ಹೆಚ್ಚು ಸಂಕುಚಿತಗೊಂಡು ಕಣ್ಣೀರು ಸುರಿಯಲಾರಂಭಿಸುತ್ತದೆ.

Leave a Reply