ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಟಿಸುತ್ತಿರುವ ದಬಾಂಗ್ -3 ಚಿತ್ರ ಕನ್ನಡಕ್ಕೆ ಡಬ್ ಆಗುತ್ತಿದೆ. ಈ ಚಿತ್ರವನ್ನು ಕನ್ನಡಿಗರು ಕನ್ನಡದಲ್ಲಿ ನೋಡಬಹುದಾದ ಅವಕಾಶ ಸಿಗುತ್ತಿದ್ದು ಹೆಸರಾಂತ ವಿತರಕರಾದ ಜಾಕ್ ಮಂಜು ಇದರ ವಿತರಣೆ ಹಕ್ಕುಗಳನ್ನು ಪಡೆದಿದ್ದು, ಮುಂದಿನ ಡಿಸೆಂಬರ್ 20 ರಂದು ಚಿತ್ರ ಬಿಡುಗಡೆ ಕಾಣುತ್ತಿದೆ.

ಸಲ್ಲು ರವರಿಗೆ ಕನ್ನಡದಲ್ಲಿ ತನ್ನ ಚಿತ್ರ ಡಬ್ ಆಗುವ ವಿಷಯ ಸಿಕ್ಕಿ ಬಹಳ ಖುಷಿಯಾಗಿದೆ. ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸಿದ್ದು ಕೂಡ ದೊಡ್ಡ ವಿಷಯವೇ. ಈ ಇಬ್ಬರು ಸ್ಟಾರ್ ಗಳು ಕ್ರಿಕೆಟ್ ಆಟದ ಸಂದರ್ಭದಲ್ಲಿ ಪರಿಚಯವಾಗಿ ಸ್ನೇಹಿತರಾಗಿದ್ದರು. ಈಗ ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದು ಖುಷಿಯಾಗಿದೆ ಎಂದು ಸಲ್ಮಾನ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here