ತೆಲಂಗಾಣ : ಮೇಲ್ಜಾತಿಯ ಯುವತಿಯನ್ನು ಪ್ರೀತಿಸಿ ಮದುವೆಯಾದ ಎಂಬ ಕಾರಣಕ್ಕೆ ಏಳು ತಿಂಗಳ ಗರ್ಭಿಣಿ ಪತ್ನಿಯ ಮುಂದೆಯೇ ಪತಿಯನ್ನು ಹೊಡೆದು ಕೊಂದ ಅಮಾನವೀಯ ಘಟನೆ ತೆಲಂಗಾಣದ ಮಿರ್ಯಾಲ್ಗುಡಾ ಪಟ್ಟಣದಲ್ಲಿ ನಡೆದಿದೆ

ಮೃತ ವ್ಯಕ್ತಿಯನ್ನು ದಲಿತ ಸಮುದಾಯದ ಪೆರುಮಲ್ಲಾ ಪ್ರಣವ್ (22) ಎಂದು ಗುರುತಿಸಿದ್ದು, ಈತ ಈ ಹಿಂದೆ ಮೇಲ್ಜಾತಿ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದನು. ಇದರ ಫಲಶ್ರುತಿ ಪತ್ನಿ ಅಮೃತಾ ವರ್ಷಿಣಿ ಏಳು ತಿಂಗಳ ಗರ್ಭಿಣಿಯಾಗಿದ್ದಳು.

ಶುಕ್ರವಾರದಂದು ಪ್ರಣಯ್ ತನ್ನ ತಾಯಿಯೊಂದಿಗೆ 7 ತಿಂಗಳ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ಚೆಕ್ ಅಪ್ ಮಾಡಿಸಿ ಹೊರಗೆ ಕರೆದುಕೊಂಡು ಬರುತ್ತಿದ್ದ ವೇಳೆ ಪ್ರಣಯ್ ತೆಲೆಗೆ ಹೊಡೆದು ಹತ್ಯೆ ಮಾಡಲಾಗಿದೆ. ಈ ದೃಶ್ಯ ಸೆರೆಯಾಗಿ ಅದರ ವಿಡಿಯೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಕುರಿತು ಹೇಳಿಕೆ ನೀಡಿರುವ ಪತ್ನಿ ಅಮೃತವರ್ಷಿಣಿ, ಇದನ್ನು ತನ್ನ ತಂದೆ ಮತ್ತು ಅವರ ಚಿಕ್ಕಪ್ಪ ಸೇರಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಮೇಲ್ಜಾತಿಯ ಅಟ್ಟಹಾಸಕ್ಕೆ ಅಮಾಯಕ ಪ್ರಾಣವೊಂದು ಬಲಿಯಾಗಿದೆ, ಇತ್ತ ಗರ್ಭಿಣಿ ಪತ್ನಿಯ ರೋಧನ ಮುಗಿಲು ಮುಟ್ಟಿದೆ. ಹೊಟ್ಟೆಯಲ್ಲಿ ಏಳು ತಿಂಗಳ ಮಗುವನ್ನು ಹೊತ್ತುಕೊಂಡಿರುವ ಅಮೃತವರ್ಷಿಣಿ ಜೀವಂತ ಶವವಾಗಿದ್ದಾಳೆ.

Leave a Reply