ನವದೆಹಲಿ :ಮೂರನೇ ಮಹಡಿಯ ಬಾಲ್ಕನಿಯಿಂದ ಭಾನುವಾರ ಬೆಳಗ್ಗೆ 48 ರ ಹರೆಯದ ಒಬ್ಬ ತಂದೆಯನ್ನು ದೂಡಿ ಕೊಂದ ಘಟನೆ ವರದಿಯಾಗಿದೆ.

ತನ್ನ ಮಗಳು ಮತ್ತು ಆಕೆಯ ಪ್ರಿಯಕರನನ್ನು ಬೆಡ್ ರೂಮಿನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೇ ಆ ಅಪ್ಪ ಮಾಡಿದ ತಪ್ಪು.

ಭಾನುವಾರ ಬೆಳಿಗ್ಗೆ ಬಿದ್ದ ಪರಿಣಾಮವಾಗಿ ಗಾಯಗಳಿಂದಾಗಿ ಸಾವನ್ನಪ್ಪಿದ ವಿಶ್ವನಾಥ್ ಸಾಹು, ತನ್ನ 21 ವರ್ಷದ ಮಗಳು ಮತ್ತು ಆಕೆಯ ಗೆಳೆಯ ಧರ್ಮೇಂದ್ರನನ್ನು ಕೋಣೆಯಲ್ಲಿ ಭಾನುವಾರ ಬೆಳಗ್ಗೆ 4 ಗಂಟೆಗೆ ನೋಡಿದ್ದರು‌. ಇದರಿಂದ ಅವರಿಬ್ಬರೂ ಸೇರಿ ಅವರನ್ನು ತಳ್ಳಿ ಸಾಯಿಸಿದ್ದಾರೆ ಎಂದು ಅವರ ಮಗ ಹೇಳಿದ್ದಾರೆ.

ಆರೋಪಿ ಧರ್ಮೇಂದ್ರ ಪರಾರಿಯಾಗಿದ್ದು, ಮಗಳನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply