ಕೊಲ್ಲಂ: ಕೊಲ್ಲಂ ಸಮೀಪದ ಪತ್ತನಾಪುರಂನಲ್ಲಿ ಕ್ರೈಸ್ತಸನ್ಯಾಸಿನಿಯೊಬ್ಬರ ಮೃತದೇಹವು ಬಾವಿಯಲ್ಲಿ ಕಂಡು ಬಂದಿದ್ದು, ಮೌಂಟ್ ತಾಬೋರ್ ದಯರ ಕಾನ್‍ವೆಂಟಿನ ಸಿಸ್ಟರ್ ಸೂಸನ್‍ರ (ಸೂಸಮ್ಮ) ಎಂಬವರ ಮೃತದೇಹವಿದು. ಈಗ ಮೃತದೇಹವನ್ನು ಮೇಲತ್ತಲಾಗಿದ್ದು ಪೋಸ್ಟ್‍ಮಾರ್ಟಂ ಸಿದ್ಧತೆ ನಡೆಯುತ್ತಿದೆ. ಮೃತದೇಹದ ಕೈನರಗಳನ್ನು ಕತ್ತರಿಸಿದ ಗುರುತು ಇದೆ. ಮೃತ ಸೂಸಮ್ಮರಿಗೆ 54 ವರ್ಷ ಪ್ರಾಯವಾಗಿತ್ತು.

ಬಾವಿಯ ಸಮೀಪದಲ್ಲಿ ಮತ್ತು ಕಾನ್‍ವೆಂಟ್‍ನಿಂದ ಬಾವಿಗೆ ಹೋಗುವ ದಾರಿಯಲ್ಲಿ ರಕ್ತದಕಲೆಗಳು ಇದ್ದವು. . ಇದು ಕೊಲೆಕೃತ್ಯವಾಗಿದೆಯೇ. ಅಥವಾ ಸಿಸ್ಟರ್ ಆತ್ಮಹತ್ಯೆ ಮಾಡಿಕೊಂಡರೇ ಎಂಬ ವಿಚಾರದಲ್ಲಿ ಪೊಲೀಸರಿಗೆ ಸಂದೇಹವಿದ್ದು, ಅಸಹಜ ಸಾವು ಎಂದು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಿಸ್ಟರ್ ಸೂಸಮ್ಮ ಅಧ್ಯಾಪಕಿಯಾಗಿದ್ದು ಸೇಂಟ್‍ಸ್ಟೀಫನ್ ಸ್ಕೂಲ್‍ನಲ್ಲಿ ಕಳೆದ 12 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದರು. ಇಂದು ಮುಂಜಾನೆ ಕಾನ್ವೆಂಟಿನ ಸಮೀಪದ ಬಾವಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು..

Leave a Reply