ಇಂದೋರ್ : ದೀಪಿಕಾ ಪಡುಕೋಣೆ ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದು ಕೊಳ್ಳುವ ಮುಂಚೆ ದೇಶದ ಸಾಮಾಜಿಕ ರಾಜಕೀಯ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳಬೇಕು. ಇಂತಹ ನಿರ್ಧಾರವನ್ನು ತೆಗೆದುಕೊಳ್ಳುವ ಮುಂಚೆ ನನ್ನಂಥವರಿಂದ ಸಲಹೆ ಪಡೆಯಬೇಕು ಎಂದು ಯೋಗ ಗುರು ರಾಮ್ ದೇವ್ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಮೊದಲು ದೀಪಿಕಾ ಪಡುಕೋಣೆ ದೇಶದ ರಾಜಕೀಯ ಸಾಮಾಜಿಕ ಸಾಂಸ್ಕೃತಿಕ ವಿಷಯಗಳನ್ನು ಅಧ್ಯಯನ ಮಾಡಬೇಕು. ಈ ವಿಷಯಗಳನ್ನು ತಿಳಿದ ಬಳಿಕ ದೊಡ್ಡ ತೀರ್ಮಾನಗಳನ್ನು ತೆಗದು ಕೊಳ್ಳಬೇಕು. ಅವರು ನನ್ನಂಥವರನ್ನು ಸಲಹೆಗಾರರನ್ನು ಹೊಂದಿರಬೇಕು ಎಂದು ರಾಮ್ ದೇವ್ ಹೇಳಿದ್ದಾರೆ. ಜನವರಿ 5 ರ ಹಿಂಸಾಚಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ನವದೆಹಲಿಯ ಜೆಎನ್‌ಯು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ದೀಪಿಕಾ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದು ಈ ನಿಟ್ಟಿನಲ್ಲಿ ರಾಮ್ ದೇವ್ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ.

ಹೊಸ ಪೌರತ್ವ ಕಾಯ್ದೆಯನ್ನು ಬಲವಾಗಿ ಬೆಂಬಲಿಸುತ್ತಿರುವ ರಾಮ್ ದೇವ್ ಸಿಎಎ ಯನ್ನು ಸರಿಯಾದ ರೂಪದಲ್ಲಿ ಅರಿಯದ ಜನರು ಪ್ರಧಾನಿ ಮೋದಿ ವಿರುದ್ಧ ಅಸಭ್ಯ ಭಾಷೆಗಳನ್ನು ಬಳಸುತ್ತಿದ್ದಾರೆ. ನಿಜವಾಗಿ ಪ್ರಧಾನಿ ಮತ್ತು ಗೃಹ ಸಚಿವರು ಪೌರತ್ವ ಕಸಿದು ಕೊಳ್ಳುವ ಬದಲು ಪೌರತ್ವ ನೀಡುವ ಉದ್ದೇಶ ಹೊಂದಿದ್ದಾರೆ,ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಕುರಿತು ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು. ಮಾತ್ರವಲ್ಲ ಜಿನ್ನಾರ ಆಜಾದಿ ಘೋಷಣೆಗಳನ್ನು ಕೂಡ ಕೂಗುತ್ತಿದ್ದಾರೆ. ಈ ಘೋಷಣೆ ಎಲ್ಲಿಂದ ಬಂತು? ಇಂತಹ ಪ್ರತಿಭಟನೆಗಳು ದೇಶದ ಚಿತ್ರಣವನ್ನು ಕೆಡಿಸುತ್ತದೆ ಎಂದು ಆರೋಪಿಸಿದರು.

LEAVE A REPLY

Please enter your comment!
Please enter your name here