ಹೊಸದಿಲ್ಲಿ: ಭಾರತೀಯ ಪುರಾತತ್ವ ಸವೇಕ್ಷಣೆ ಇಲಾಖೆಯು ದಕ್ಷಿಣ ದಿಲ್ಲಿಯಲ್ಲಿ 14ನೇ ಶತಮಾನದ ಕಿರ್ಕಿ ಮಸೀದಿಯಲ್ಲಿ ಮಧ್ಯಯುಗದ ನಾಣ್ಯದ ಭಂಡಾರವನ್ನು ಪತ್ತೆ ಹಚ್ಚಿದೆ.
ಸರ್ವೇಕ್ಷಣೆ ಇಲಾಖೆಯ ದಿಲ್ಲಿ ವಲಯದ ಓರ್ವ ಹಿರಿಯ ಅಧಿಕಾರಿ ಈ ನಾಣ್ಯವು ಸೋಮವಾರ ಮಸೀದಿಯ ಶುಚೀಕರಣದ ವೇಳೆ ಪತ್ತೆಯಾಯಿತು ಎಂದು ಮಾಧ್ಯಮಗಳಿಗೆ ತಿಳಿಸಿದರು.

ಎಲ್ಲ ಪುನರ್‍ಪ್ರಾಪ್ತ ದಾಸ್ತಾವೇಜುಗಳಲ್ಲಿ ಪುರಾತತ್ವೀಯ ಮೌಲ್ಯಗಳಿದ್ದು ಅವುಗಳನ್ನು ಸಂರಕ್ಷಿಸಲಾಗಿದೆ. ನಾಣ್ಯದ ವಿವರವನ್ನು ತಿಳಿಯಲಿಕ್ಕಾಗಿ ಅಧ್ಯಯನ ಆರಂಭಗೊಂಡಿದೆ ಎಂದೂ ಅಧಿಕಾರಿ ತಿಳಿಸಿದರು. ನಮ್ಮ ನೌಕರರಿಗೆ ಸೋಮವಾರ ಮಧ್ಯಯುಗದ 254 ನಾಣ್ಯಗಳು ಸಿಕ್ಕಿದ್ದು ಇದು ಧಾತುವಿನದ್ದೆಂದು ಅಧಿಕಾರಿ ಹೇಳಿದರು.

ಸತ್ಪುಲಾ ಸಮೀಪದಲ್ಲಿನ ಮಸೀದಿ, ಜಹಾಂಪನಾಹ್‍ನ ದಕ್ಷಿಣ ಗೋಡೆಯ ಬಳಿ ಏಳು ಕಮಾನಿರುವ ಸೇತುವೆ ಇದೆ. ಹದಿನಾಲ್ಕನೆ ಶತಮಾನದ ಮಧ್ಯಭಾಗದಲ್ಲಿ ಫಿರೋಝ್ ಶಾ ತುಗಲಕ್‍ನ ಪ್ರಧಾನಿ ಇದನ್ನು ನಿರ್ಮಿಸಿದ್ದನು. ದಿಲ್ಲಿ ಸರ್ಕಲ್, ಪುರಾತತ್ವದ ಅಧಿಕಾರಿ ಎನ್‍ಕೆ ಪಾಠಕ್ ಮಂಗಳವಾರ ಫೇಸ್‍ಬುಕ್‍ನಲ್ಲಿ ಕೆಆರ್‍ಕೆ ರೆಡ್ಡಿ ನೇತೃತ್ವದ ಪುರಾತತ್ವ ಸರ್ವೇಕ್ಷಣಾಧಿಕಾರಿಗಳ ತಂಡ ನಾಣ್ಯವನ್ನು ಅಧ್ಯಯನಿಸುತ್ತಿದೆ ಎಂದು ತಿಳಿಸಿದರು. ಮಸೀದಿ ನವೀಕರಣ ಕಾರ್ಯವನ್ನು ಎರಡು ತಿಂಗಳಿಂದ ಸರ್ವೇಕ್ಷಣಾ ಇಖಾಖೆ ಮಾಡುತ್ತಿದೆ.

Leave a Reply