ನವದೆಹಲಿ: 2019ರ ಪ್ರಜಾಪ್ರಭುತ್ವ ಸೂಚ್ಯಂಕ ಬುಧವಾರ ಬಿಡುಗಡೆಗೊಂಡಿದ್ದು, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಹತ್ತು ಸ್ಥಾನ ಕುಸಿತ ಕಂಡಿದೆ. ಇದಕ್ಕೆ ದೇಶದಲ್ಲಿ ನಾಗರಿಕ ಸ್ವಾತಂತ್ರ್ಯ ಕ್ಷೀಣಿಸುತ್ತಿರುವುದೇ ಕಾರಣ ಎಂದು ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ಬಿಡುಗಡೆ ಮಾಡಿದ ವಾರ್ಷಿಕ ಸೂಚ್ಯಂಕದಲ್ಲಿ ವಿವರಿಸಿದೆ.

ಪ್ರಜಾಪ್ರಭುತ್ವದ ಹಿನ್ನಡೆ ಮತ್ತು ಜನಪ್ರಿಯ ಪ್ರತಿಭಟನೆಗಳ ವರ್ಷ ಎಂಬ ಶೀರ್ಷಿಕೆಯ ವರದಿಯು 165 ದೇಶಗಳು ಮತ್ತು ಎರಡು ಪಾತ್ರಗಳಲ್ಲಿನ ಪ್ರಜಾಪ್ರಭುತ್ವದ ಸ್ಥಿತಿಯನ್ನು ಒಳಗೊಂಡಿದೆ. 2019 ರ ಸೂಚ್ಯಂಕದಲ್ಲಿ ಪ್ರಜಾಪ್ರಭುತ್ವದ ಸರಾಸರಿ ಜಾಗತಿಕ ಅಂಕಗಳು 2018 ರಲ್ಲಿದ್ದ 5.48 ರಿಂದ 5.44 ಕ್ಕೆ ಕುಸಿದಿದೆ. ಸೂಚ್ಯಂಕ ವ್ಯವಸ್ಥೆ ಜಾರಿಗೆ ಬಂದ ಬಳಿಕದ 14 ವರ್ಷಗಳಲ್ಲೇ ಇದು ಅತ್ಯಂತ ಕೆಟ್ಟ ಸರಾಸರಿ ಜಾಗತಿಕ ಸೂಚ್ಯಂಕವಾಗಿದೆ. ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ 370ನೇ ಮತ್ತು 35ಎ ವಿಧಿಯನ್ನು ರದ್ದುಪಡಿಸಿದ ಬಳಿಕ ಹೇರಿದ ನಿರ್ಬಂಧಗಳು, ರಾಜಕೀಯ ಮುಖಂಡರ ಗೃಹಬಂಧನ ಮತ್ತು ಭಾರೀ ಪ್ರಮಾಣದ ಸೇನೆ ನಿಯೋಜನೆ ಮೊದಲ ಕಾರಣ ಎಂದು ವರದಿ ತಿಳಿಸಿದೆ. ಮತ್ತೊಂದು ಕಾರಣ ಅಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯ (NRC). ಅಂತಿಮ ಪಟ್ಟಿಯಿಂದ 19 ಲಕ್ಷವನ್ನು ಹೊರಗಿಟ್ಟಿದ್ದು ಎನ್ನಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ದೊಡ್ಡ ಪ್ರಮಾಣದಲ್ಲಿ ಮುಸ್ಲಿಮರನ್ನು ಕೆರಳಿಸಿದ್ದು ಪ್ರಮುಖ ನಗರಗಳಲ್ಲಿ ಪ್ರತಿಭಟನೆ ಹುಟ್ಟುಹಾಕಿದೆ ಎಂದು ಸಂಶೋಧನಾ ತಂಡ ಅಭಿಪ್ರಾಯ ಪಟ್ಟಿದೆ.

ನಾಗರಿಕರ ರಾಷ್ಟ್ರೀಯ ನೋಂದಣಿಯೊಂದಿಗೆ ಸಂಯೋಜಿಸಿದಾಗ, ಇದು ಮುಸ್ಲಿಮರ ವಿರುದ್ದ ತಾರತಮ್ಯಕ್ಕೆ ಕಾರಣವಾಗಬಹುದು ಎಂಬ ಆತಂಕ ದೇಶಾದ್ಯಂತ ಮನೆ ಮಾಡಿದೆ. ಈ ಎಲ್ಲ ಕಾರಣಗಳಿಂದ ಭಾರತದ ಪ್ರಜಾಪ್ರಭುತ್ವ ಸೂಚ್ಯಂಕ ಕುಸಿತ ಕಂಡಿದೆ. ಯಾರಿಗೆ ಯಾವ ಸ್ಥಾನ ಜಾಗತಿಕ ಶ್ರೇಯಾಂಕದಲ್ಲಿ ನಾರ್ವೆ ದೇಶ ಪ್ರಥಮ ಸ್ಥಾನ ಪಡೆದುಕೊಂಡಿದೆ. ಐಸ್ ಲ್ಯಾಂಡ್ ಹಾಗೂ ಸ್ವೀಡನ್ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದುಕೊಂಡಿದೆ. ನ್ಯೂಜಿಲೆಂಡ್ 4ನೇ ಸ್ಥಾನದಲ್ಲಿದ್ದರೆ, ಫಿನ್ಲ್ಯಾಂಡ್ (5), ಐರ್ಲೆಂಡ್ (6), ಡೆನ್ಮಾರ್ಕ್(7) , ಕೆನಡಾ (8) , ಆಸ್ಟ್ರೇಲಿಯಾ (9) ಹಾಗೂ ಸಿಟ್ಟರ್ಲೆಂಡ್ (10) ಟಾಪ್ 10 ಪಟ್ಟಿಯಲ್ಲಿವೆ. ಅಲ್ಲದೆ, ಚೀನಾ 153ನೇ ಸ್ಥಾನದಲ್ಲಿದ್ದು, ಉತ್ತರ ಕೊರಿಯಾ ಜಾಗತಿಕ ಸೂಚ್ಯಂಕದಲ್ಲಿ ಕಟ್ಟ ಕಡೆಯ ಅಂದರೆ 167ನೇ ಸ್ಥಾನ ಪಡೆದುಕೊಂಡಿದೆ. 2006ರಿಂದ ಪ್ರತಿ ವರ್ಷ ದಿ ಎಕನಾಮಿಕ್ಸ್ ಇಂಟೆಲಿಜೆನ್ ಯುನಿಟ್ ಈ ಸೂಚ್ಯಂಕ ಬಿಡುಗಡೆ ಮಾಡುತ್ತದೆ.

Leave a Reply