ಸ್ವಂತ ಹೆಸರಿನ ಸ್ಥಳವಿಲ್ಲದ ಕಾರಣ ಪತ್ನಿಯ ಮೃತ ದೇಹವನ್ನು ಮನೆಯೊಳಗೆ ಅಂತ್ಯ ಸಂಸ್ಕಾರ ಮಾಡಿದ ಘಟನೆ ಬಿಹಾರದ ಮಾಧೇಪುರ ಜಿಲ್ಲೆಯಲ್ಲಿ ನಡೆದಿದೆ. ಹರಿನಾರಾಯಣ್ ರಿಶಿದೇವ್ ಎಂಬ ವ್ಯಕ್ತಿ ತನ್ನ ಪತ್ನಿ ಸಹ್ಯೋಗಾ ದೇವಿ(35) ಯನ್ನು ಮನೆಯೊಳಗೆ ಅಂತಿಮ ಸಂಸ್ಕಾರ ಮಾಡಿದ್ದಾರೆ.

ದಲಿತ ಜಾತಿಗೆ ಸೇರಿದ ಇವರ ಸಮುದಾಯಕ್ಕೆ ಪ್ರತ್ಯೇಕ ಸ್ಮಶಾನವಿಲ್ಲ ಎಂಬ ಕಾರಣಕ್ಕೆ ಅವರು ತನ್ನ ಪತ್ನಿಯ ಅಂತ್ಯ ಸಂಸ್ಕಾರವನ್ನು ಮನೆಯಲ್ಲೇ ಮಾಡಬೇಕಾಯಿತು.

ಭೂಮಿಯಿಲ್ಲದವರಿಗೆ ಸರಿಯಾಗಿ ಜೀವಿಸಲು ಮತ್ತು ಸಾಯಲು ಈ ಸಮಾಜವು ಅವಕಾಶ ನೀಡುತ್ತಿಲ್ಲ. ನನ್ನಂತೆ ಇತರರಿಗೆ ಈ ಅವಸ್ಥೆ ಬರಬಾರದು. ಎಲ್ಲಾ ಪಂಚಾಯತ್ ಗಳಲ್ಲಿಯೂ ನಮ್ಮ ಸಮುದಾಯಕ್ಕೆ ಸ್ಮಶಾನ ಒದಗಿಸಬೇಕು ಎಂದು ಹರಿನಾರಾಯಣ್ ಅಳಲನ್ನು ತೋಡಿ ಕೊಂಡಿದ್ದಾರೆ. ಈ ಸಮುದಾಯವನ್ನು ಸ್ವಸ್ಥವಾಗಿ ಜೀವಿಸಲೂ ಸಾಯಲೂ ಬಿಡುತ್ತಿಲ್ಲವೆಂದು ಗ್ರಾಮದ ಮಾಜಿ ನೇತಾರ ಬೇಚನ್ ರಿಶಿದೇವ್ ಹೇಳಿದ್ದಾರೆ.

Leave a Reply