ಮಧ್ಯ ಪ್ರದೇಶದಲ್ಲಿ ದೇವಾಸ್ ನಿವಾಸಿಗಳು ಪ್ರಾಣ ಪಣಕ್ಕಿಟ್ಟು ತೂಗು ಸೇತುವೆಯನ್ನು ದಾಟುತ್ತಿರುವ ದೃಶ್ಯ ನಿಜಕ್ಕೂ ತುಂಬಾ ಭಯಾನಕವಾಗಿದೆ. ಭಾರತಕ್ಕೆ ಸ್ವಾತಂತ್ತ್ರ್ಯ ದೊರಕಿ ಹಲವಾರು ದಶಕಗಳು ಸಂದರೂ ಇಂದೂ ಈ ಪರಿಸ್ಥಿತಿ ಇರುವುದು ಶೋಚನೀಯವಾಗಿದೆ. ದೇಶವು ಐಟಿ ಯುಗದಲ್ಲಿ ಇರುವಾಗ ಈ ಬಡಜನರು ಪಡುತ್ತಿರುವ ಪಾಡು ತುಂಬಾ ದೌರ್ಭಾಗ್ಯಕರ.

ಮಧ್ಯ ಪ್ರದೇಶದ ಸೋಂಕಾಚ್ ನಿವಾಸಿಗಳು ತತ್ಕಾಲಿಕ ಹಗ್ಗದ ಸೇತುವೆಯನ್ನು ನದಿ ದಾಟಲು ಬಳಸುತ್ತಿದ್ದಾರೆ . ಹಲವು ಬಾರಿ ಸ್ಥಳೀಯರು ತಮ್ಮ ಮಕ್ಕಳನ್ನು ದೊಡ್ಡ ದೊಡ್ಡ ಪಾತ್ರೆಗಳನ್ನು ತಮ್ಮ ಜೊತೆ ಹೊತ್ತೊಯ್ಯಬೇಕಾಗುತ್ತದೆ. ರಾತ್ರಿಗಳಲ್ಲೂ ಈ ಸೇತುವೆಯನ್ನು ದಾಟಬೇಕಾಗುತ್ತದೆ . ಸೇತುವೆ ದಾಟುವಾಗ ಎಷ್ಟೋ ಮಂದಿ ನದಿಗೆ ಬಿದ್ದ ಘಟನೆಗಳು ಸಂಭವಿಸಿವೆ ಎಂದು ವರದಿಯಾಗಿದೆ.

ಗ್ರಾಮಸ್ಥರು ಸೇತುವೆ ದಾಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಂಟೆರ್ ನೆಟ್ಟಿಗರು ಸ್ಥಳೀಯ ಶಾಸಕರು ಮತ್ತು ಜನ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here