ಮೂಡಿಗೆರೆಯ: ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಧನ್ಯಾ ಆತ್ಮಹತ್ಯೆಗೆ ಮೂಡಿಗೆರೆ ನಗರ ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷ ಕಾರಣ ಎಂದು ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಲಭ್ಯವಾಗಿದೆ.

ನನ್ನ ಸಾವಿಗೆ ಬಿಜೆಪಿ ಮತ್ತು ಭಜರಂಗದಳದವರು ಕಾರಣ. ನಾನು ಸತ್ತ ಮೇಲೂ ಅವರನ್ನು ಸುಮ್ಮನೆ ಬಿಡಲ್ಲ. ಅವರ ಮೇಲೆ ಸೇಡು ತೀರಿಸಿಯೇ ತೀರಿಸುವೆ ಎಂದು ಧನ್ಯಾ ಸಾವಿಗೆ ಮುನ್ನ ಬರೆದಿಟ್ಟ ಡೆತ್ ನೋಟ್‌ನಲ್ಲಿ ಲಭ್ಯವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷ ಅನಿಲ್ ಎಂಬಾತ ತೀವ್ರ ಮಾನಸಿಕ ಕಿರುಕುಳ ನೀಡುತ್ತಿದ್ದು ಇದರಿಂದ ಬೇಸತ್ತ ಕುಮಾರಿ ಧನ್ಯಾ ಆತ್ಮಹತ್ಯೆ ನಡೆಸಿರುವ ಹಿನ್ನೆಲೆಯಲ್ಲಿ ಹೆತ್ತವರ ದೂರಿನ ಮೇರೆಗೆ ಚಿಕ್ಕಮಗಳೂರು ಪೋಲಿಸ್ ಅಧಿಕಾರಿ ಎಸ್.ಪಿ.ಅಣ್ಣಾಮಲೈ ಈಗಾಗಲೇ ಆರೋಪಿಯನ್ನು ಬಂಧಿಸಿದ್ದಾರೆ.

Leave a Reply