ಮೂಡಿಗೆರೆಯಲ್ಲಿ ಧನ್ಯಾ ಎಂಬ ಇಪ್ಪತ್ತು ವರ್ಷದ ಹುಡುಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈಕೆಯ ಸಾವಿಗೆ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರ ನೈತಿಕ ಪೊಲೀಸ್ ಗಿರಿ ಕಾರಣ ಎನ್ನುವ ಆರೋಪ ವ್ಯಕ್ತವಾಗಿದೆ .

ಈ ಹುಡುಗಿ ಮೂಡಿಗೆರೆ ಪದವಿ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಯಾವುದೋ ಹುಡುಗನೊಂದಿಗೆ ಸ್ನೇಹ ಮಾಡಿದ್ದಾಳೆ ಎಂದು ಸ್ವಜಾತಿಯ ಯುವಕನೋರ್ವ ಈಕೆಯನ್ನು ವಾಟ್ಸಾಪ್ ಮೆಸೇಜ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾನೆ.
ಈ ಹುಡುಗಿ ಸ್ನೇಹ ಮಾಡಿದರೆ ತಪ್ಪೇನು. ಅವರು ಒಳ್ಳೆಯವರು ಎಂದು ಸಮರ್ಥನೆ ಮಾಡಿಕೊಂಡಿದ್ದಾಳೆ

. ಇದರಿಂದ ಕೋಪಗೊಂಡ ಸ್ವಜಾತಿಯ ಯುವಕ ಮೂಡಿಗೆರೆಯ ಜನರಿಗೆ ತಿಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಧನ್ಯಾಳೊಂದಿಗೆ ಚಾಟ್ ಮಾಡಿದ್ದನ್ನು ಇತರೆ ವಾಟ್ಸಾಪ್ ಗ್ರೂಪ್ ಗಳಲ್ಲಿ ವೈರಲ್ ಮಾಡಿದ್ದಾನೆ. ಮೂಡಿಗೆರೆಯ ಕೆಲವು ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಗೆ ವಿಷಯ ತಿಳಿಸಿದ್ದಾನೆ.

ವಿಷಯ ತಿಳಿದ ಮೂಡಿಗೆರೆಯ ಬಿಜೆಪಿ ಕಾರ್ಯಕರ್ತರು ಜನವರಿ 5 ರಂದು ಮೂಡಿಗೆರೆ ಟೌನ್ ಛತ್ರಮೈದಾನದಲ್ಲಿನ ಹುಡುಗಿಯ ಮನೆಗೆ ಹೋಗಿ ಆಕೆಯ ತಂದೆ ತಾಯಿಗೆ ವಿಷಯ ಮುಟ್ಟಿಸಿದ್ದಾರೆ. ಮತ್ತು ಹುಡುಗಿಗೆ ಎಚ್ಚರಿಕೆ ನೀಡಿದ್ದಾರೆ.
ಇದರಿಂದ ಮನನೊಂದ ಹುಡುಗಿ ಜನವರಿ 6ನೇ ತಾರೀಖಿನಂದು ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹುಡುಗಿ ಆತ್ಮಹತ್ಯೆ ಗೆ ಆಕೆಯೊಂದಿಗಿನ ವಾಟ್ಸಾಪ್ ಚಾಟ್ ಗಳನ್ನು ಸ್ಕ್ರೀನ್‌ ಶಾಟ್ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟು ಆಕೆಯ ಮಾನ ಹರಾಜು ಹಾಕಿದ್ದು ಕಾರಣ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ .

ಈ ಬಗ್ಗೆ ತಕ್ಷಣ ಗಮನ ಹರಿಸಿ ಮಲೆನಾಡು ಮತ್ತೊಂದು ಕರಾವಳಿ ಆಗುವುದನ್ನು ಚಿಗುರಿನಲ್ಲೇ ಚಿವುಟಿ ಹಾಕಬೇಕಾಗಿ ಜಿಲ್ಲಾ ರಕ್ಷಣಾ ಧಿಕಾರಿಗಳಲ್ಲಿ ಕೆಲವರು ಮನವಿ ಮಾಡಿದ್ದಾರೆ.ಎಫ್ಐಆರ್ ದಾಖಲಿಸುವ ವೇಳೆ ಒತ್ತಡ ತಂತ್ರ ಅನುಸರಿಸಲಾಗಿದೆ ಎನ್ನುವ ಗುಮಾನಿಯೂ ಇದೆ .

ವರದಿ ಕೃಪೆ: ಉದಯ ಬುಲೆಟಿನ್. ಕಾಮ್

Leave a Reply