ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ಗಂಭೀರ್ ಬಿಜೆಪಿಯಿಂದ ಸ್ಪರ್ಧಿಸು ಸಾಧ್ಯತೆ ಯಿದೆ. ದೆಹಲಿಯಲ್ಲಿ ಮೀನಾಕ್ಷಿ ಲೇಖ್ ಬದಲು ಗೌತಮ್ ಗಂಭೀರ್ ರನ್ನು ಕಣಕ್ಕಿಳಿಸಲು ಬಿಜೆಪಿ ಯೋಜನೆ ಹಾಕಿಕೊಂಡಿದೆ. ಧೋನಿಯನ್ನು ಜಾರ್ಖಂಡ್ ನಿಂದ ಕಣಕ್ಕಿಳಸುವ ಯೋಜನೆಯೂ ಇದೆ. ಈ ಈರ್ವರು ಆಟಗಾರರ ಜನಪ್ರಿಯತೆಯ ಪ್ರಯೋಜನ ಪಡೆಯುವುದು ಬಿಜೆಪಿಯ ಉದ್ದೇಶವಾಗಿದೆ.
ಈಗ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸುಪರ್ ಕಿಂಗ್ಸ್ ನಾಯಕನಾಗಿದ್ದಾರೆ. ಆದ್ದರಿಂದ ದಕ್ಷಿಣ ಭಾರತದ ಚುನಾವಣಾ ರಂಗದಲ್ಲಿ ದೋನಿ ಭಾಗವಹಿಸುವ ಸಾಧ್ಯತೆಯಿದೆ. ಈ ಕುರಿತು ಧೋನಿಯೊಂದಿಗೆ ಪಕ್ಷವು ಮಾತುಕತೆ ನಡೆಸಿದೆ.
ಗೌತಮ್ ಗಂಭೀರ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿ ಯಶಸ್ವಿಯಾಗಿದ್ದರು. ಕ್ರಿಕೆಟ್ ತಾರೆ ಎನ್ನುವುಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಪ್ರತಿಕ್ರಿಯಿಸುತ್ತಾ ಜನಪ್ರಿಯರಾಗಿದ್ದಾರೆ. ಧೋನಿ ಮತ್ತು ಗಂಭೀರ್ ಬಿಜೆಪಿ ಪಾಳಯದಲ್ಲಿದ್ದರೆ ಪಕ್ಷಕ್ಕೆ ಭಾರೀ ಪ್ರಯೋಜನ ಸಿಗಬಹುದೆಂಬ ಆಶಾಭಾವ ಬಿಜೆಪಿ ಹೊಂದಿದೆ.