ಏಶ್ಯಾ ಕಪ್ ನಲ್ಲಿ ಭಾರತದ ಮಾಜಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಶೂನ್ಯಕ್ಕೆ ಔಟ್ ಆದಾಗ ಭಾರತೀಯ ಕ್ರಿಕೆಟ್ ಪ್ರೇಮಿಗಳು ತೀವ್ರ ನಿರಾಶರಾಗಿದ್ದರು. ಆದರೆ ಬಾಲಕನೊಬ್ಬ ದೋನಿ ಔಟ್ ಆದಾಗ ನಿರಾಶನಾಗುವ ದೃಶ್ಯವೀಗ ವೈರಲ್ ಆಗಿದೆ.

ಬಹಳ ಆವೇಶದಿಂದ ಆಟಗಾರನನ್ನು ಸ್ವಾಗತಿಸಿದ್ದ ಈತ ದೋನಿ ಶೂನ್ಯಕ್ಕೆ ಔಟ್ ಆಗುವಾಗ ಹತ್ತಿರದಲ್ಲಿದ್ದ ತಾಯಿಯೊಂದಿಗೆ ಈ ಕುರಿತು ಹೇಳಿ ಬಳಿಕ ಕುರ್ಚಿಯನ್ನು ಹೊಡೆಯುವ ದೃಶ್ಯವೂ ಸೆರೆ ಹಿಡಿಯಲಾಗಿದೆ. ಈ ಅಭಿಮಾನಿ ಬಾಲಕನ ನಿರಾಶೆ ಕೋಪ ಎಲ್ಲವೂ ವೈರಲ್ ಆಗಿದೆ.

Leave a Reply