ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯನವರ ಸಾಧನ ಸಮಾವೇಶದ ವೇಳೆ ತಮ್ಮ ಬೇಡಿಕೆಯ ಮನವಿಯನ್ನು ಸಲ್ಲಿಸಲು ಬಂದ ವಿಕಲಚೇತನರೊಬ್ಬರನ್ನು ಪೊಲೀಸರು ಎಳೆದು ಹೊರಹಾಕಿರುವ ಘಟನೆ ನಡೆದಿದೆ.

ಕಡೂರಿನ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ಸಿಎಂ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳ ಕುರಿತ ಸಾಧನಾ ಸಮಾವೇಶ ಸಂದರ್ಭದಲ್ಲಿ ವಿಕಲಚೇತನರೊಬ್ಬರು ತಮಗೆ ಸಿಗಬೇಕಾದ ಸೌಲಭ್ಯಗಳ ಮನವಿ ಪತ್ರ ಹಿಡಿದು ಸಿಎಂ ವೇದಿಕೆ ಹತ್ತಲು ಹೋಗುತ್ತಿದ್ದರು. ಆದರೆ ಈ ವೇಳೆ ಆ ವಿಕಲಚೇತನರನ್ನು ಪೊಲೀಸರು ತಡೆದಿದ್ದು ಸಿಎಂ ಮತ್ತು ಶಾಸಕರ ಮುಂದೆಯೇ ಈ ಘಟನೆ ನಡೆದದ್ದು ವಿಷಾದನೀಯವಾಗಿದೆ.

ವಿಡಿಯೋ ಕೃಪೆ : ಸುವರ್ಣ ನ್ಯೂಸ್

 

Leave a Reply