ಚೆನ್ನೈ: ಇಲ್ಲಿನ ಬ್ಯೂಟಿಪಾರ್ಲೊಂದರಲ್ಲಿ ಮಹಿಳೆಯೊಬ್ಬರನ್ನು ಕ್ರೂರವಾಗ ಹೊಡೆದಿರುವ ಡಿಎಂಕೆ ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳ್ನಾಡಿನ ಪೆರಂಬಲೂರ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು ಡಿಎಂಕೆ ಮಾಜಿ ಕೌನ್ಸಿಲರ್ ಶೆಲ್ವಕುಮಾರ ಎಂಬಾತ ಮಹಿಳೆಗೆ ಥಳಿಸುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಮಹಿಳೆ ಶೆಲ್ವಕುಮಾರನಿಂದ ಐದು ಲಕ್ಷ ಸಾಲ ಪಡೆದಿದ್ದರು.

ಮಹಿಳೆಯನ್ನು ಬಲವಾಗಿ ಹೊಡೆಯುವುವುದು ಮತ್ತು ಮಹಿಳೆ ನೋವಿನಿಂದ ಚೀರುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿವೆ. ಮಹಿಳೆ ಜತೆ ಇದ್ದ ಇತರ ಮಹಿಳೆಯರು ಸೆಲ್ವನನ್ನು ತಡೆಯಲು ಯತ್ನಿಸುತ್ತಿದ್ದಾರೆ. ಘಟನೆ ಬಹಿರಂಗಗೊಂಡ ಬೆನ್ನಿಗೆ ಸೆಲ್ವಕುಮಾರನನ್ನು ಡಿಎಂಕೆ ಪಕ್ಷದಿಂದ ಅಮಾನತುಗೊಳಿಸಿದೆ.

Leave a Reply