photo courtesy : Timesnow

ರಾಜಸ್ತಾನದ ಬಾರ್ಮರ್ ನಲ್ಲಿ ವಿದ್ಯುತ್ ಅವಘಡಕ್ಕೊಳಗಾಗಿ ಸಾವನ್ನಪ್ಪಿದ ಮಹಿಳೆಯರ ಮರಣೋತ್ತರ ಪರೀಕ್ಷೆಯು ನಡುರಸ್ತೆಯಲ್ಲಿ ನಡೆಯಿತು. ಅಪಘಾತ ನಡೆದ ಸ್ಥಳದಿಂದ ನೂರು ಕಿಮೀಮಧ್ಯೆ ಯಾವುದೇ ಶವಾಗಾರ ಇಲ್ಲದ ಕಾರಣ ಮಾನವೀಯತೆಯ ನೆಲೆಯಲ್ಲಿ ರಸ್ತೆಯಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಬೇಕಾಗಿ ಬಂತು ಎಂದು ವೈದ್ಯರು ತಮ್ಮ ಕೃತ್ಯವನ್ನು ಸಮರ್ಥಿಸಿದ್ದಾರೆ.

ಬಾರ್ಮರ್ ನ ಗದಾರ ರಸ್ತೆಯಲ್ಲಿ ವಾಸಿಸುವ ರಾಜಾದೇವಿ ಸೊಸೆ ಮಾಯಾ ಕನ್ವಾರ್ ಎಂಬವರು ಟೆರೇಸಿನ ಮೇಲ್ ಬಟ್ಟೆ ಒಣಗಿಸಲು ಹಾಕುವಾಗ ವಿದ್ಯುತ್ ತಂತಿ ತಗುಲಿದಾಗ ಮಾಯಾ ಬೊಬ್ಬೆ ಹಾಕಿದಾಗ ರಾಜಾದೇವಿ ರಕ್ಕಿಸಲು ಬಂದಾಗ ಶಾಕ್ ಆಗಿ ಸಾವಿಗೀಡಾಗಿದ್ದರು. ಇವರ ಪತಿ ಪದಂ ಸಿಂಗ್ ರಿಗೂ ಶಾಕ್ ತಗಲಿದೆ.

ಮೂವರನ್ನು ಜೋಧ್ ಪುರ ರೈಲ್ವೆ ನಿಲ್ದಾಣದ ಬಳಿಯಿರುವ ಹೆಲ್ತ್ ಸೆಂಟರ್ ಗರ ಕೊಂಡು ಹೋದರೂ ಬದುಕಿಸಲಾಗಲಿಲ್ಲ. ಪದಂ ಸಿಂಗ್ ರನ್ನು ವಿಶೇಷ ಚಿಕಿತ್ಸೆಗೆ ಒಳಪಡಿಸಲಾಗಿದೆ. ಈರ್ವರು ಮಹಿಳೆಯರ ಸಾವು ಖಚಿತವಾದ ಕಾರಣ ರಸ್ತೆಯಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

Leave a Reply