ಚೀನಾದಲ್ಲಿ ವ್ಯಕ್ತಿಯೊಬ್ಬರು ಮಧ್ಯರಾತ್ರಿಯಲ್ಲಿ ಕಿವಿಯೊಳಗೆ ತೀಕ್ಷ್ಣವಾದ ನೋವಿಂದ ಎಚ್ಚರಗೊಂಡಿದ್ದು ಕುಟುಂಬಿಕರಿಗೆ ಕಿವಿಯನ್ನು ತೋರಿಸಿದಾಗ ಕಿವಿಯಲ್ಲಿ ಏನೋ ಚಲಿಸುತ್ತಿರುವಂತೆ ಕಂಡು ಬಂತು. ಕೂಡಲೇ ವೈದ್ಯರ ಬಳಿಗೆ ಹೋಗುವಂತೆ ಮನೆಯವರು ಸಲಹೆ ನೀಡಿದರು. 24 ವರ್ಷದ ಎಲ್ವಿ ಎನ್ನುವ ಯುವಕನ ಕಿವಿಯಿಂದ ಹತ್ತಕ್ಕೂ ಹೆಚ್ಚು ಜಿರಳೆಗಳನ್ನು ಹೊರತೆಗೆಯಲಾಯಿತು. ಏನೋ ಗೀಚುವ ಅಥವಾ ಒಳಗೆ ಚಲಿಸುತ್ತಿರುವಂತೆ ಭಾಸವಾಗುತ್ತಿತ್ತು. ಮಾತ್ರವಲ್ಲ ಕಿವಿ ಬಹಳ ನೋಯುತ್ತಿತ್ತು ಎಂದು ಎಲ್ವಿ ತನ್ನ ಅನುಭವವನ್ನು ಹೇಳಿದ್ದಾರೆ.

ಕಿವಿಯೊಳಗೆ ಜಿರಳೆ ಹತ್ತಕ್ಕೂ ಹೆಚ್ಚು ಮೊಟ್ಟೆಗಳನ್ನಿತ್ತಿತ್ತು. ಅದು ಒಡೆದು ಮರಿಗಳಾಗಿ ಚಲಿಸುತ್ತಿತ್ತು ಎಂದು ಡಾಕ್ಟರ್ Dr Zhong Yijin ಹೇಳಿದ್ದಾರೆ. ಸುಮಾರು 10 ಜಿರಳೆ ಮರಿಗಳನ್ನು ಕಿವಿಯಿಂದ ಹೊರತೆಗೆಯಲಾಗಿದ್ದು ಅವರ ಕಿವಿಗೆ ಸ್ವಲ್ಪ ಹಾನಿಯಾಗಿದೆ. ಬಳಿಕ ವೈದ್ಯರು ಕಿವಿಗೆ ಮುಲಾಮು ಹಚ್ಚಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದರು.

ಜಿರಳೆ ಹರಡುವುದನ್ನು ತಡೆಯಲು ಮನೆಯಲ್ಲಿ ನೈರ್ಮಲ್ಯ ಬಹಳ ಮುಖ್ಯ. ಚರಂಡಿಗಳು ಮತ್ತು ಒಳಚರಂಡಿ ಗಳನ್ನು ನಿಯಮಿತವಾಗಿ ಶುಚಿಗೊಳಿಸಬೇಕು. ಸೋಂಕು ಹರಡದಂತೆ ನೋಡಿಕೊಳ್ಳಬೇಕು. ಮಲಗುವ ಸಮಯದಲ್ಲಿ ಸೊಳ್ಳೆ ಪರದೆಗಳು ಬಳಸುವುದು ಬಹಳ ಉಪಕಾರಿ ಎಂದು ವೈದ್ಯರು ಹೇಳಿದ್ದಾರೆ. ಇಂತಹ ಘಟನೆ ಇದೇ ಮೊದಲಲ್ಲ. ಕಳೆದ ವರ್ಷ ಭಾರತದ ವ್ಯಕ್ತಿಯೊಬ್ಬನ ಕಣ್ಣಿನಿಂದ 15 ಸೆಂಟಿಮೀಟರ್ ಉದ್ದದ ಹುಳವನ್ನು ಹೊರತೆಗೆದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

LEAVE A REPLY

Please enter your comment!
Please enter your name here