ರಾಜಸ್ಥಾನದಲ್ಲಿ ವ್ಯಕ್ತಿಯೋರ್ವನ ಹೊಟ್ಟೆಯಿಂದ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ 116 ಮೊಳೆ, ತಂತಿ ಹಾಗೂ ಗೋಲಿಗಳನ್ನು ಹೊರತೆಗೆದಿದ್ದಾರೆ. ರಾಜಸ್ಥಾನದ ಬೂಂದೀ ಜಿಲ್ಲೆಯ ಆಸ್ಪತ್ರೆಯಲ್ಲಿ ಡಾಕ್ಟರ್ ಗಳ ತಂಡ ಸೋಮವಾರ ಮಾನಸಿಕ ಅಸ್ವಸ್ಥರ ಹೊಟ್ಟೆಯಿಂದ ಶಸ್ತ್ರಚಿಕಿತ್ಸೆಯ ಮೂಲಕ 116 ಕಬ್ಬಿಣದ ಮೊಳೆ ಗೋಲಿ ಹಾಗೂ ತಂತಿಗಳನ್ನು ಹೊರತೆಗೆದಿದ್ದಾರೆ. ಅವರ ಹೊಟ್ಟೆಯಲ್ಲಿ ಇವೆಲ್ಲಾ ಹೇಗೆ ಬಂತು ಎಂದು ಹೇಳಲು ರೋಗಿ ಸಮರ್ಥರಾಗಿಲ್ಲ.ಅವರ ಹೊಟ್ಟೆಯಿಂದ ಹೊರತೆಗೆದ ಪ್ರತೀ ಮೊಳೆಯ ಉದ್ದ 6.5 ಇಂಚು ಇತ್ತು.

ಎಕ್ಸ್ ರೇ ನೋಡಿದಾಗ ನಮಗೆ ಹೊಟ್ಟೆಯಲ್ಲಿ ಇವುಗಳು ಇರುವುದು ಕಂಡು ಆಶ್ಚರ್ಯ ಆಯಿತು. ರೋಗಿಯು ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಇವುಗಳು ಹೇಗೆ ಹೊಟ್ಟೆಯೊಳಗೆ ಹೋಯಿತು ಎಂದು ಕೇಳಿದರೆ ಉತ್ತರಿಸುತ್ತಿಲ್ಲ, ಆದರೆ ಈಗ ಶಸ್ತ್ರಚಿಕಿತ್ಸೆಯ ಬಳಿಕ ರೋಗಿ ಆರೋಗ್ಯವಾಗಿದ್ದಾನೆ ಎಂದು ಡಾಕ್ಟರ್ ನಿಲ್ ಸೈನಿ ANI ಗೆ ತಿಳಿಸಿದರು.

Leave a Reply