ಅಮರಿಕ: ಭಾರತ ಎಸ್-400 ಡಿಫೆನ್ಸ್ ಮಿಸೈಲ್ ಖರೀದಿ ಒಪ್ಪಂದ ರಷ್ಯದೊಂದಿಗೆ ಮಾಡಿಕೊಂಡಿರುವುದು ಅಮೆರಿಕದ ತಲೆನೋವಿಗೆ ದೊಡ್ಡ ಕಾರಣವಾಗಿದೆ. ಇದಕ್ಕಿಂತ ಮೊದಲು ಚೀನ ರಷ್ಯದಿಂದ ಯುದ್ಧ ವಿಮಾನಗಳನ್ನು ಖರೀದಿಸಿತ್ತು. ಈ ಎಲ್ಲ ವಿದ್ಯಾಮಾನಗಳು ಟ್ರಂಪ್ ರೋಷತಪ್ತರಾಗಲು ಕಾರಣವಾಗಿದ್ದು, ನವೆಂಬರ್ ನಾಲ್ಕರ ನಂತರ ಜಗತ್ತಿನ ಯಾವುದೇ ದೇಶ ಇರಾನ್‍ನಿಂದ ತೈಲ ಖರೀದಿಸಲಿ ಆಮೇಲೆ ಏನಾಗುತ್ತದೆ ನೋಡಲಿ ಎಂದು ಟ್ರಂಪ್ ಜಗತ್ತಿನ ಇತರೆಲ್ಲ ದೇಶಕ್ಕೆ ಬೆದರಿಕೆ ಹಾಕಿದ್ದಾರೆ.
“ದಮ್ಮಿದ್ದರೆ ನವೆಂಬರ್ ನಾಲ್ಕರ ನಂತರ ಇರಾನ್‍ನಿಂದ ಯಾವುದೇ ದೇಶ ತೈಲ ಖರೀದಿಸಿ ನೋಡಲಿ. ಒಂದು ವೇಳೆ ಯಾರಾದರೂ ಹಾಗೆ ಮಾಡಿದರೆ ಅಂತಹವರ ವಿರುದ್ಧ ಅಮೆರಿಕ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಟ್ರಂಪ್ ಗುಡುಗಿದರು.
ಡೊನಾಲ್ಡ್ ಟ್ರಂಪ್ ಇರಾನ್‍ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿದ್ದು, ನವೆಂಬರ್ ನಾಲ್ಕನೆ ತಾರೀಕಿನ ನಂತರ ಕಚ್ಚಾ ತೈಲ ತರಿಸಿಕೊಳ್ಳುವ ದೇಶಗಳನ್ನು ಅಮೆರಿಕ ನೋಡಿಕೊಳ್ಳಲಿದೆ ಎಂದು ಹೇಳಿದರು. ಆದರೆ ಭಾರತ ಮತ್ತು ಚೀನಾಗಳು ಇರಾನ್‍ನಿಂದ ತೈಲ ತರಿಸಿಕೊಳ್ಳುತ್ತಿದೆ. ಈ ಕುರಿತು ಯಾವ ಕ್ರಮಕೈಗೊಳ್ಳುವಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ತರಿಸಿಕೊಂಡು ನೋಡಲಿ ಅವರನ್ನು ನಾವು ನೋಡಿಕೊಳ್ಳುತ್ತೇವೆ ಎಂದರು.
ಭಾರತ ರಷ್ಯದಿಂದ ಎಸ್.400 ಮಿಸೈಲ್ ಖರೀದಿಸಿದ್ದು ಅಮೆರಿಕ ಭಾರತದ ವಿರುದ್ಧ ಅಮೆರಿಕ ಕಾನೂನಿನಂತೆ ಕ್ರಮಕೈಗೊಳ್ಳಲಿದೆಯೇ ಎಂದು ಪ್ರಶ್ನಿಸಿದಾಗ ಈಬಗ್ಗೆ ಬೇಗನೆ ನಿಮಗೆ ತಿಳಿಯುತ್ತದೆ ಎಂದು ಟ್ರಂಪ್ ಹೇಳಿದರು. ಅಮೆರಿಕ ಇರಾನ್‍ನೊಂದಿಗೆ 20015ರಲ್ಲಿಮಾಡಿಕೊಂಡ ಪರಮಾಣು ಒಪ್ಪಂದದಿಂದ ಟ್ರಂಪ್ ಹಿಂದೆ ಸರಿz ನಂತರ ಅಮೆರಿಕು ಇರಾನ್ ವಿರುದ್ಧ ದಿಗ್ಬಂಧನ ಹೇರಿತ್ತು. ತನ್ನ ವಿರೋಧಿಗಳ ವಿರುದ್ಧ ದಿಗ್ಬಂಧ ಹೇರಲೆಂದೇ ಕೌಂಟಿಂಗ್ ಅಮೆರಿಕಾಸ್ ಎಡ್ವೈಸರೀಸ್ ಥ್ರೂ ಸೆಕ್ಷನ್ ಏಕ್ಟ್ ಎಂಬ ಕಾನೂನನ್ನು ಅಮೆರಿಕ ಪಾಸು ಮಾಡಿದೆ. ಇದರ ಪ್ರಕಾರ ರಷ್ಯದೊಂದಿಗೆ ಶಸ್ತ್ರಾಸ್ತ್ರ ಖರೀದಿಯ ಒಪ್ಪಂದ ಮಾಡಿಕೊಂಡ ರಾಷ್ಟ್ರಗಳ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರವನ್ನು ಅಧ್ಯಕ್ಷರಿಗೆ ನೀಡಲಾಗಿದೆ . ಐದು ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ವ್ಯವಹಾರಕ್ಕಾಗಿ ಭಾರತದ ವಿರುದ್ಧ ಅಮೆರಿಕ ದಿಗ್ಬಂಧನ ಹೇರಬಹುದಾಗಿದೆ. ಕಳೆದ ತಿಂಗಳು ಚೀನಾ ವಿರುದ್ಧ ಅಮೆರಿಕ ದಿಗ್ಬಂಧನ ಹೇರಿತ್ತು. ಚೀನ ರಷ್ಯದ ಯುದ್ಧ ವಿಮಾನ ಮತ್ತು ರಕ್ಷಣಾ ಮಿಸೈಲ್ ಖರೀಸಿದ್ದಕ್ಕಾಗಿ ಅಮೆರಿಕ ದಿಗ್ಬಂಧನ ವಿಧಿಸಿದೆ.