ಹೊಸದಿಲ್ಲಿ: ದಲಿತ ಎಂಬ ಪದ ಬಳಕೆ ಸಲ್ಲ ಎಂದು ಖಾಸಗಿ ಟಿವಿ ಚ್ಯಾನೆಲ್‍ಗಳಿಗೆ ಕೇಂದ್ರ ವಾರ್ತಾ ಪ್ರಸಾರ ಸಚಿವಾಲಯ ಸೂಚನಾ ಪತ್ರ ಕಳುಹಿಸಿದೆ. ಆಗಸ್ಟ್ ಏಳರ ಸೂಚನಾದೇಶವನ್ನು ದಲಿತ ಸಂಘಟನೆಗಳು ಇದನ್ನು ವಿರೋಧಿಸುತ್ತಿವೆ.

ಕೇಂದ್ರ ಸರಕಾರದ ಸಚಿವಾಲಯ ಮಧ್ಯಪ್ರದೇಶ, ಮುಂಬೈ ಹೈಕೋರ್ಟಿನ ಆದೇಶಗಳನ್ನು ಬೆಟ್ಟುಮಾಡಿ ಸೂಚನೆ ಹೊರಡಿಸಿದ್ದು, ಪರಿಶಿಷ್ಟ ಜಾತಿ ವಿಭಾಗಕ್ಕೆ ಮಾಧ್ಯಮಗಳು ಇನ್ನು ಮುಂದೆ ದಲಿತರು ಎನ್ನುವ ಪದವನ್ನು ಉಪಯೋಗಿಸಬಾರದೆಂದು ಸಚಿವಾಲಯ ಹೇಳುತ್ತಿದೆ. ಮಧ್ಯಪ್ರದೇಶ ಹೈಕೋರ್ಟು ಸಂವಿಧಾನದಲ್ಲಿ ದಲಿತ ಪದವಿಲ್ಲದ್ದರಿಂದ ಉಪಯೋಗಿಸಬಾರದೆಂದು ಆದೇಶ ನೀಡಿತ್ತು.

ಈ ವಿಷಯದಲ್ಲಿ ಸೂಕ್ತ ಮಾರ್ಗದರ್ಶನ ನೀಡುವಂತೆ ಸರಕಾರಕ್ಕೆ ಮುಂಬೈ ಹೈಕೋರ್ಟು ಸೂಚಿಸಿತ್ತು. ಸಾಮಾಜಿಕ ನ್ಯಾಯ ಇಲಾಖೆ ಕಳೆದ ಮಾರ್ಚ್‍ನಲ್ಲಿ ಕೇಂದ್ರ ಮತ್ತು ರಾಜ್ಯಸರಕಾರಗಳು ದಲಿತ ಎನ್ನುವುದಕ್ಕೆ ಪರಿಶಿಷ್ಟ ಜಾತಿಯನ್ನು ಪರ್ಯಾಯಪದವಾಗಿ ಸೂಚಿಸಿತ್ತು. ಆದರೆ ಹೊಸ ಆದೇಶ ಪರಿಶಿಷ್ಟ ಜಾತಿ ವಿಭಾಗದವರಲ್ಲಿ ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಸರಕಾರದಿಂದ ದಲಿತ ಪದವನ್ನು ಮೂಲೆ ಗುಂಪು ಮಾಡುವ ಯತ್ನ ನಡೆಯುತ್ತಿದೆ. ಅದು ತಮ್ಮ ಅಸಿತ್ವದ ಭಾಗವಾಗಿದೆ ಎಂದು ದಲಿತ ಹೋರಾಟಗಾರ ಅರವಿಂದ್ ಕುಮಾರ್ ಹೇಳಿದರು.

ಸಾಂದರ್ಭಿಕ ಚಿತ್ರ

Leave a Reply