ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45೦ ಎಕರೆ ವಿಶಾಲವಾದ ಪ್ರವಾಸಿತಾಣ ಮಾನಸ ಅಮ್ಯೂಸ್ಮೆಂಟ್ ಪಾರ್ಕ್ ನಲ್ಲಿ ಪಿಕ್ ನಿಕ್ ಗೆಂದು ಓರ್ವ ಹಿಂದೂ ಬಾಲಕಿ ಓರ್ವ ಮುಸ್ಲಿಮ್ ಬಾಲಕ ಹಾಗೂ ಇನ್ನೋರ್ವ ಬಾಲಕಿಯನ್ನೊಳಗೊಂಡ ಮೂವರು ಅಪ್ರಾಪ್ತರ ತಂಡವು ತೆರಳಿತ್ತು. ಇನ್ನೇನು ಅಲ್ಲಿಂದ ಮರಳಿ ಹೊರಗಡಿ ಇಡಬೇಕೆನ್ನುವಾಗ ಅಲ್ಲಿನ ಸೆಕ್ಯೂರಿಟಿ ಗಾರ್ಡ್ ಅವರನ್ನು ತಡೆದು ಹೊರಗೆ 30 ಜನರ ತಂಡವೊಂದಿದ್ದು ಪೋಲಿಸರು ಬರುವವರೆಗೆ ಹೊರಗಡಿ ಇಡಬೇಡಿರೆಂದು ತಿಳಿಸಿದರು. ಏನೂ ಅರಿಯದ ಅವರು ಪೋಲಿಸರ ಬರುವಿಕೆಗಾಗಿ ಕಾದು ನಿಂತರು. ತದನಂರ ಕಾವೂರು ಪೋಲಿಸ್ ಠಾಣೆಯ ಪೋಲಿಸರ ತಂಡವು ಅವರನ್ನು ಕರೆದುಕೊಂಡು ಕಾರ್ ನ ಬಳಿ ಕರೆತರುತ್ತಿದ್ದಾಗ ಕೆಂಪು ಮತ್ತು ಕಪ್ಪು ಬಣ್ಣದ ಪಟ್ಟಿಯ ಟಿ-ಶರ್ಟ್ ಧಾರಿ ವ್ಯಕ್ತಿಯೊಬ್ಬ ಯುವತಿಯ ತಲೆಗೆ ಬಲವಾಗಿ ಹೊಡೆದನು.ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಮುಸ್ಲಿಮ್ ಹುಡುಗನೊಂದಿಗೆ ಬಂದುದಕ್ಕಾಗಿ ಹಿಂದೂ ಸಂಸ್ಕೃತಿ ,ಲವ್ ಜಿಹಾದ್ ನಂತಹ ಪದಗಳನ್ನುಪಯೋಗಿಸಿ ಬೈಯ್ಯಲಾರಂಭಿಸಿದನು. ಪೋಲಿಸರು ನೆನರೆದಿದ್ದ ಗುಂಪನ್ನು ಹತೋಟಿಗೆ ತಂದು ಮೂವರನ್ನೂ ಕರೆದುಕೊಂಡು ಠಾಣೆಗೆ ಕರೆತಂದಿದ್ದರು.

ಘಟನಾವಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಸುದ್ದಿ ತಿಳಿದು ಆಗಮಿಸಿದ ಬಾಲಕಿಯ ತಾಯಿ ರೇಖಾ ರವರು “ನಮ್ಮ ವೈಯಕ್ತಿಕ ಜೀವನದಲ್ಲಿ ಮೂಗುತುರಿಸುವ ಹಕ್ಕು ನಿಮಗಿಲ್ಲ “ಎಂದು ಹಿಂದೂ ಜಾಗರಣಾ ವೇದಿಕೆಯ ಈ ಕೃತ್ಯಕ್ಕೆ ಉತ್ತರವಿತ್ತರು. ತನ್ನ ಮಗಳು ತನ್ನ ಅನುಮತಿ ಪಡೆದು ಇನೋರ್ವ ಸ್ನೇಹಿತೆ ಹಾಗೂ ಸ್ನೇಹಿತ ಜೊತೆಗೆ ಅಲ್ಪ ಸಮಯ ಮನೋರಂಜನೆಗಾಗಿ ಪಾರ್ಕ್ ಗೆ ತೆರಳಿದ್ದರು.ಅಷ್ಟಕ್ಕೂ ನಮ್ಮ ವೈಯಕ್ತಿಕ ಜೀವನದಲ್ಲಿ ಭಾಗಿಯಾಗುವ ಹಕ್ಕು ನಿಮಗಿಲ್ಲ ಎಂದಿದ್ದು ತನ್ನ ಮಗಳ ಮೇಲಾದ ಈ ಕೃತ್ಯವನ್ನು ಖಂಡಿಸಿ ದೂರು ದಾಖಲಿಸಿದ್ದಾರೆ.

17 ವರ್ಷ ಪ್ರಾಯದ ಬಾಲಕಿ ತನ್ನ ತಲೆಗೆ ಹೊಡೆದಿದ್ದನ್ನು ಹಾಗೂ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದನ್ನು ತಾಯಿಯ ಬಳಿ ಹೇಳಿಕೊಂಡಿದ್ದಾಳೆ. ಕೌಟುಂಬಿಕ ವಿಚಾರಗಳಲ್ಲಿ ಈ ರೀತಿ ಸಂಘಟನೆಗಳು ಮಧ್ಯಪ್ರವೇಶ ಮಾಡುತ್ತಿರುವುದು ಇತ್ತೀಚೆಗೆ ಕರಾವಳಿ ಪ್ರದೇಶಗಳಲ್ಲಿ ವ್ಯಾಪಿಸುತ್ತಿರುವುದು ಅಪಾಯಕಾರಿ ಎಂದು ಇನ್ನೋರ್ವ ಸಂತ್ರಸ್ತರ ಪೋಷಕರು ಘಟನೆಯ ಕುರಿತು ಆಘಾತ ವ್ಯಕ್ತಪಡಿಸಿದರು.
ಪೋಲಿಸರು ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಬಾರತೀಯ ದಂಡ ಸಂಹಿತೆಯ ಅನ್ವಯ ಸೆಕ್ಷನ್ 341, ಸೆಕ್ಷನ್ 324, ಸೆಕ್ಷನ್ 506, ಸೆಕ್ಷನ್ 509, ಸೆಕ್ಷನ್ 355, ಸೆಕ್ಷನ್153 ರ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡ್ ಶೆಡ್ ನ ಸಂಪತ್ ಶೆಟ್ಟಿ ಎಂಬುವರರನ್ನು ಬಂಧಿಸಲಾಗಿದೆ.

ವರದಿ : ದಿ ನ್ಯೂಸ್ ಮಿನಿಟ್

Leave a Reply