ಹೊಸದಿಲ್ಲಿ: ಸೈದ್ದಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಸಾಮಾಜಿಕ ಜಾಲಾತಾಣಗಳಲ್ಲಿ ನಿಂದಾನಾತ್ಮಕ ಮತ್ತು ಕೊಳಕು ಸುದ್ದಿಗಳನ್ನು ಹರಡಿರಿ, ಅದು ಯೋಗ್ಯ ಸಮಾಜಕ್ಕೆ ಸೂಕ್ತವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಾರಾಣಸಿಯ ಬಿಜೆಪಿ ಕಾರ್ಯಕರ್ತರೊಂದಿಗೆ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಕಾರಾತ್ಮಕ ಸುದ್ದಿಗಳಿಗೆ ಪೂರಕ ವಾತಾವರಣ ಕಲ್ಪಿಸಿ ಒಳ್ಳೆಯ ಸಮಾಜ ನಿರ್ಮಿಸಬೇಕಾಗಿದೆ. ದುರದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಮೊಹಲ್ಲಾದ ಎರಡು ಕುಟುಂಬಗಳ ಕಲಹ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುವಂತಾಗಿದೆ. ಜನರ ಇಂತಹ ಮನಸ್ಥಿತಿಯನ್ನು ಬದಲಾಯಿಸಬೇಕು ಎಂದು ಕರೆ ನೀಡಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು, ಕೆಲವರು ಹಿಂದು-ಮುಂದು ನೋಡದೇ ಜಾಲತಾಣಗಳಲ್ಲಿ ಕಂಡ ಸುದ್ದಿಗಳನ್ನು ಪರಾಂಬರಿಸಿ ನೋಡದೆ ಫಾರ್ವರ್ಡ್ ಮಾಡುತ್ತಾರೆ ಇಲ್ಲವೇ ಪೋಸ್ಟ್ ಮಾಡುತ್ತಾರೆ. ಅರ್ಥಹೀನ ಸುದ್ದಿ/ಸಂದೇಶಗಳು/ನಿಂದನಾತ್ಮಕ ಬರಹಗಳಿಂದ ಸಮಾಜಕ್ಕೆ ಎಷ್ಟು ದೊಡ್ಡ ಹಾನಿ ಉಂಟಾಗುತ್ತದೆ ಎಂಬುದನ್ನು ಅವರು ಯೋಚಿಸುವುದಿಲ್ಲ. ಕೆಲವರಂತೂ ಸಭ್ಯ ಸಮಾಜದ ವರ್ತನೆಗೆ ಧಕ್ಕೆ ತರುವ ರೀತಿಯಲ್ಲಿ ಪದಗಳ ಬಳಕೆ ಮಾಡುತ್ತಾರೆ. ಮಹಿಳೆಯರ ಬಗ್ಗೆಯಂತೂ ಏನನ್ನಾದರೂ ಕಮೆಂಟ್ ಮಾಡುತ್ತಾರೆ. ಇಲ್ಲವೇ ಬರೆಯುತ್ತಾರೆ ಎಂದು ಮೋದಿ ವಿಷಾದ ವ್ಯಕ್ತಪಡಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಕೆಟ್ಟ ಸಂದೇಶಗಳನ್ನು ಹರಡದಂತೆ ಸುಮಾರು 125 ಕೋಟಿ ಭಾರತೀಯರು ತಮ್ಮನ್ನು ತರಬೇತಿಗೊಳಿಸಬೇಕು. ‘ಸ್ವಚ್ಚತಾ ಅಭಿಯಾನ್’ ಕೇವಲ ನೈರ್ಮಲ್ಯದ ಬಗ್ಗೆ ಅಲ್ಲ, ಮಾನಸಿಕ ಪರಿಶುದ್ಧತೆಗೂ ಕರೆಕೊಡುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸುತ್ತಮುತ್ತಲಿನ ಸಕಾರಾತ್ಮಕ ಉತ್ತಮ ಸಂದೇಶಗಳನ್ನು ಹರಡಲು ಪ್ರಯತ್ನಿಸಬೇಕು. ಬದಲಾಗುತ್ತಿರುವ ಭಾರತದ ಚಿತ್ರಣವನ್ನು ಹೈಲೈಟ್ ಮಾಡುವ ವಿಡಿಯೋ ಗಳನ್ನೂ ಸಾಮಾಜಿಕ ಜಾಲಗಳಲ್ಲಿ ಪ್ರಚಾರ ಮಾಡಲು ಕರೆ ಕೊಟ್ಟರು.

Leave a Reply