ಇದು ನಮ್ಮ ಊರು: ನಮ್ಮ ದೇಶದಲ್ಲಿ ನಿರುದ್ಯೋಗ ಯಾವ ಮಟ್ಟದಲ್ಲಿದೆ ಎಂಬುದು ನಮಗೆಲ್ಲ ಗೊತ್ತಿರುವ ವಿಷಯವಾಗಿದೆ. ಯುವಕರಿಗೆ ಅವರ ಅರ್ಹತೆಗೆ ತಕ್ಕ ಉದ್ಯೋಗ ನಮ್ಮ ದೇಶದಲ್ಲಿ ಸಿಗುವುದು ಕಷ್ಟ ಸಾಧ್ಯ! ಇಂತಹದ್ದೇ ಸಮಸ್ಯೆಯಿಂದ ಬಳಲಿದ ಕೇರಳದ ಯುವಕನೊಬ್ಬ ಮಣ್ಣಿನ ಮಡಿಕೆ ಮಾಡಿ ಮಾರಾಟ ಮಾಡುವುದರಲ್ಲಿ ತಾನಂ ಜೀವನವನ್ನು ಕಟ್ಟಿಕೊಂಡಿದ್ದಾರೆ. ತ್ರಿಶೂರ್ ನ ಚಾವಕ್ಕಾಡ್ ನಿವಾಸಿ 29 ವರ್ಷದ ಅರುಣ್ ವ್ಯಕ್ತಿ ಹೋಟೆಲ್ ನಿರ್ವಹಣೆ ಮತ್ತು ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಎರಡು ಕ್ಷೇತ್ರದಲ್ಲಿ ಉದ್ಯೋಗ ಮಾಡಿ ಅನುಭವವಿರುವ ಅರುಣ್ ಗೆ ಸೌದಿ ಅರೇಬಿಯಾದಲ್ಲಿ ಅಕೌನ್ಟೆಂಟ್ ಆಗಿಯೂ ಕೆಲಸ ಮಾಡಿದ ಅನುಭವವಿದೆ. ಆದರೆ ಈ ಯಾವುದೇ ಅನುಭವವು ಅರುಣ್ ಅವರ ಕೆಲಸ ಕ್ಕೆ ಬರಲಿಲ್ಲ. ಲಾಕ್ ಡೌನ್ ಸಮಯದಲ್ಲಿ ಉದ್ಯೋಗ ಕಳೆದುಕೊಂಡ ಅರುಣ್ ಗೆ ಬೇರೆ ಕೆಲಸ ಸಿಗಲೇ ಇಲ್ಲ. ಕೊನೆಗೆ ಅರುಣ್ ತಮ್ಮದೇ ಆದ ಮಡಿಕೆ ಮಾರಾಟದ ಸ್ವಯಂ ಉದ್ಯೋಗವನ್ನು ಪ್ರಾರಂಭಿಸಿದರು.

ಲಾಕ್ ಡೌನ್ ಗಿಂತ ನಾಲ್ಕು ತಿಂಗಳ ಹಿಂದೆಯಷ್ಟೇ ಅರುಣ್ ಮದುವೆಯಾಗಿದ್ದರು. ಅರುಣ್ ಅವರ ಪತ್ನಿಯ ಸಂಬಂಧಿಕರು ಮಡಿಕೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಉದ್ಯೋಗ ವಿಲ್ಲದೆ ಕಷ್ಟ ಪಡುತ್ತಿರುವಾಗ ಅವರು ಅರುಣ್ ಸಹಾಯಕ್ಕೆ ಬಂದರು. ಈಗ ಮಣ್ಣಿನ ಮಡಕೆಗಳ ಮಾರಾಟದಿಂದ ಯೋಗ್ಯವಾದ ಆದಾಯ ಬರುತ್ತಿದೆ ಎಂದು ಅರುಣ್ ಹೇಳುತ್ತಾರೆ.

Leave a Reply