ನವದೆಹಲಿ – ಮಕ್ಕಳಿಗೆ ಸರ್ಕಾರಿ ಕೆಲಸ ಸಿಗುವುದಿಲ್ಲ ಎಂದು ಮಧ್ಯಮ ವರ್ಗದ ಮುಸ್ಲಿಂ ಕುಟುಂಬಗಳಲ್ಲಿನ ಪೋಷಕರು ಸಾಮಾನ್ಯವಾಗಿ ನಂಬುತ್ತಾರೆ. ಆದ್ದರಿಂದ ಕಲಿಕೆಗಿಂತ ಇತರ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಎಂದು ಭಾವಿಸುತ್ತಾರೆ. ಆದರೆ ಮಧ್ಯಮ ವರ್ಗದ ಕುಟುಂಬದ ಯುವತಿಯೊಬ್ಬಳು ಉಪ ಪೊಲೀಸ್ ವರಿಷ್ಠಾಧಿಕಾರಿಯಾಗುವ ಮೂಲಕ ಇಂತಹ ಎಲ್ಲ ಪೂರ್ವಗ್ರಹವನ್ನು ತೊಡೆದು ಹಾಕಿದ್ದಾಳೆ.

ಇಂದೋರ್ ನಿವಾಸಿ ಶಬೇರಾ ಅನ್ಸಾರಿ ಅವರನ್ನು ಮಧ್ಯಪ್ರದೇಶದ ದೇವಾಸ್‌ನಲ್ಲಿ ಡಿಎಸ್‌ಪಿ (women’s cell) ಆಗಿ ನೇಮಕ ಮಾಡಲಾಗಿದ್ದು, ಆಕೆಯ ತಂದೆಯನ್ನು ಇಂದೋರ್‌ನ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಿಸಲಾಗಿದೆ.

ಆಕೆಯ 19 ನೇ ವಯಸ್ಸಿನಲ್ಲಿ, ಮದುವೆಯ ಪ್ರಸ್ತಾಪಗಳು ಬರಲಾರಂಭಿಸಿದವು. ಆದರೆಏನಾದರೂ ಸಾಧಿಸಬೇಕು ಎಂಬ ಛಲವಿತ್ತು. ಕೊನೆಗೆ ಅವರು ಪೊಲೀಸ್ ಪಡೆಗಳಲ್ಲಿ ಸೇರಿಕೊಂಡು ಡಿಎಸ್ಪಿ ಆದರು. ಪ್ರಸ್ತುತ ಅವರು ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.

ಇಂದೋರ್‌ನ ಸರ್ಕಾರಿ ಶಾಲೆಯಿಂದ ಹೊರಬಂದ ಕೂಡಲೇ ತಾನು ಕಾಲೇಜಿಗೆ ಸೇರಿಕೊಂಡೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಗಳಿಗೆ ತಯಾರಿ ಆರಂಭಿಸಿದೆ ಎಂದವರು ಹೇಳುತ್ತಾರೆ. ಅವರು 2013 ರಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಆಯ್ಕೆಯಾದರು, ಮತ್ತು 2018 ರಲ್ಲಿ ಸಿಧಿಯಲ್ಲಿ ಟ್ರೈನಿ ಡಿಎಸ್ಪಿ ಆಗಿ ನೇಮಕಗೊಂಡರು.

ಶಬೇರಾ ಅವರ ಕುಟುಂಬ ಮೂಲತಃ ಉತ್ತರ ಪ್ರದೇಶದ ಬಲ್ಲಿಯಾ ಮೂಲದವರು, ಆದರೆ ಸುಮಾರು 30 ವರ್ಷಗಳ ಹಿಂದೆ ಇಂದೋರ್‌ನಲ್ಲಿ ನೆಲೆಸಿದರು. ಅವರ ತಂದೆ ಕೂಡ ಓರ್ವ ಪೊಲೀಸ್.

“ನಾನು ಶಾಲೆಯಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿದ್ದೆ ಮತ್ತು ಗಣಿತಶಾಸ್ತ್ರದಲ್ಲೂ ಒಮ್ಮೆ ಫೇಲ್ ಆಗಿದ್ದೆ. ನನ್ನ ತಾಯಿ ಯಾವಾಗಲೂ ನನ್ನನ್ನು ಬೆಂಬಲಿಸುತ್ತಿದ್ದರು. ನನ್ನ ತಂದೆ ಪೊಲೀಸ್ ಸೇವೆಯಲ್ಲಿರುವುದರಿಂದ ಯಾವಾಗಲೂ ಆಸಕ್ತಿ ಇತ್ತು. ಆದರೆ ನಾನು ಪೊಲೀಸ್ ಆಗುತ್ತೇನೆ ಎಂಬ ಸ್ಪಷ್ಟತೆ ಇರಲಿಲ್ಲ” ಎಂದು ಅವರು ಐಎಎನ್‌ಎಸ್‌ಗೆ ಚಕ್ಕಲ್ ಜೊತೆ ಹೇಳಿದರು. ಹಲವು ವೇಳೆ ಅವರು ಮಕ್ಕಳ ಜೊತೆ ಸಂವಹನ ನಡೆಸಲು ಶಾಲಾ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆ.

“ಸಣ್ಣ ಮಕ್ಕಳು ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ತುಂಬಾ ಇಷ್ಟಪಡುತ್ತಾರೆ. ನಾನು ಯಾವಾಗಲೂ ಮಕ್ಕಳನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತೇನೆ ಮತ್ತು ಜೀವನದಲ್ಲಿ ಏನಾದರೂ ಮಾಡಲು ಅವರನ್ನು ಪ್ರೇರೇಪಿಸುತ್ತೇನೆ” ಎಂದು ಅವರು ಮುಗುಳ್ನಕ್ಕರು.

ಅವರು ಹೇಳಿದರು: “ನಾನು ಹೆಚ್ಚಾಗಿ ಮುಸ್ಲಿಂ ಕುಟುಂಬಗಳ ಮಕ್ಕಳಿಗೆ, ವಿಶೇಷವಾಗಿ ಹುಡುಗರಿಗೆ ಸಲಹೆ ನೀಡುತ್ತೇನೆ. ಪ್ರತಿಯೊಬ್ಬರೂ ತಮ್ಮನ್ನು ನಂಬಿ ಗಂಭೀರವಾಗಿ ಕಲಿಕೆಗೆ ಗಮನ ಕೊಡಬೇಕು ಎಂದು ನಾನು ಹೇಳುತ್ತೇನೆ..

ಅವಳು ತನ್ನ ತಂದೆಯೊಂದಿಗೆ ರಾತ್ರಿಯಲ್ಲಿ ಗಸ್ತು ಕರ್ತವ್ಯಕ್ಕೆ ಹಲವು ಬಾರಿ ಹೋಹೋಗಿದ್ದೇನೆ. ಮನೆಗೆ ಮರಳಿ ಅಡುಗೆ ಮಾಡುತ್ತೇನೆ ಓರ್ವ ಅಧಿಕಾರಿ ಎಂಬ ನೆಲೆಯಲ್ಲಿ ನನ್ನ ತಂದೆಯವರು ನನ್ನನ್ನು ತುಂಬಾ ಗೌರವದಿಂದ ಕಾಣುತ್ತಾರೆ. ಆದರೆ ನಾನು ಕಚೇರಿಯಲ್ಲಿ ಮಾತ್ರ ಅಧಿಕಾರಿ ಮನೆಯಲ್ಲಿ ನಿಮ್ಮ ಮಗಳು ಎಂದು ಹೇಳುತ್ತೇನೆ ಎಂದು ಹೇಳಿದರು.

Leave a Reply