ನೆದರ್‍ಲೆಂಡ್‍ನಲ್ಲಿ ಇಸ್ಲಾಮ್ ವಿರೋಧಿ ಡಚ್ ಸಂಸದ ಗಿರ್ಟ್ ವಿಲ್ಡಸ್ ಇಸ್ಲಾಮ್ ಧರ್ಮದ ಪ್ರವಾದಿ ಮುಹಮ್ಮದ್(ಸ)ರ ಕಾರ್ಟೂನು ಸ್ಪರ್ಧೆ ಏರ್ಪಡಿಸುವುದಾಗಿ ಕರೆ ನೀಡಿದ ಬಳಿಕ ಜಗತ್ತಿನಾದ್ಯಂತ ಮುಸ್ಲಿಮರು ಆಕ್ರೋಶ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ನವೆಂಬರ್ನಲ್ಲಿ ರಾಜಧಾನಿಯಲ್ಲಿ ನಿಗದಿತ ಪ್ರವಾದಿ ಮುಹಮ್ಮದ್ ರವರ ಕುರಿತ ಕಾರ್ಟೂನ್ ಸ್ಪರ್ಧೆಯನ್ನು ರದ್ದುಪಡಿಸಲಾಗಿದೆ.

ತನ್ನ ಮುಸ್ಲಿಂ ವಿರೋಧಿ ಧೋರಣೆಗಾಗಿ ಹೆಸರುವಾಸಿ ಆಗಿರುವ ಡಚ್ ಸಂಸದ ಗಿರ್ಟ್ ವಿಲ್ಡಸ್ ರವರಿಗೆ ಹಲವಾರು ವರ್ಷಗಳಿಂದ ಜೀವ ಬೆದರಿಕೆಯಿದ್ದು, ಅವರು ಭಧ್ರತಾ ವ್ಯವಸ್ಥೆಯ ಕಣ್ಗಾವಲಲ್ಲೆ ಬದುಕುತ್ತಿದ್ದರು. ಆದರೆ ಇದೀಗ 26 ವರ್ಷದ ಪಾಕಿಸ್ತಾನಿ ಯುವಕನಿಂದ ಗಂಭೀರ ಜೀವ ಬೆದರಿಕೆ ಬಂದ ನಂತರ ಅವರು ಈ ಸ್ಪರ್ಧೆ ಆಯೋಜಿಸುವುದರಿಂದ ಹಿಂದೆ ಸರಿದಿದ್ದಾರೆ. 26 ವರ್ಷದ ಪಾಕಿಸ್ತಾನಿ ಯುವಕನನ್ನು ಬಂಧಿಸಲಾಗಿದೆ.

“ಹಿಂಸಾಚಾರದ ಅಪಾಯವನ್ನು ತಪ್ಪಿಸಲು, ಕಾರ್ಟೂನ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ. ಇದು ಕೇವಲ ನನ್ನ ಬಗ್ಗೆ ಅಲ್ಲ ದೇಶದ ಸುರಕ್ಷತೆಯ ನಿಟ್ಟಿನಲ್ಲೂ ಆಗಿದೆ. ಇಸ್ಲಾಂ ಮತ್ತೊಮ್ಮೆ ತನ್ನ ಎದುರಾಳಿಗಳನ್ನು ಕೊಲ್ಲುವ ನೈಜ ಮುಖ ಪ್ರದರ್ಶಿಸಿದೆ. ಸಾವಿನ ಬೆದರಿಕೆ, ಫತ್ವಾಗಳು ಮತ್ತು ಹಿಂಸೆಯ ಮುಖವನ್ನು ತೋರಿಸಿದೆ” ಎಂದು ಹೇಳಿದ್ದಾರೆ.

ಮುಸ್ಲಿಮರ ಭಾವಾನಾತ್ಮಕ ವಿಷಯವನ್ನು ಕೆಣಕುವ ಇಂತಹ ಅವಮಾನಕರ ಸ್ಪರ್ಧೆಯನ್ನು ವಿಶ್ವದಾದ್ಯಂತ ಮುಸ್ಲಿಮರು ವಿರೋಧಿಸಿದ್ದಾರೆ. ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹಮೂದ್ ಕುರೇಶಿ ಒಐಸಿ ಪ್ರಧಾನ ಕಾರ್ಯದರ್ಶಿಗೆ ಒಂದು ಪತ್ರ ಬರೆದು ತುರ್ತು ಸಭೆ ಕರೆಯುವಂತೆ ಆಗ್ರಹಿಸಿದ್ದರು. ಪಾಕಿಸ್ತಾನದ ಬೇಡಿಕೆಯನ್ನು ಟರ್ಕಿ ಬೆಂಬಲಿಸಿತ್ತು.

Leave a Reply