ಬೇಕಾಗುವ ಸಾಮಗ್ರಿಗಳು:

ವಿೂನಿನ ಮಾಂಸ – 1/2 ಕೆಜಿ, ಟೊಮ್ಯಾಟೊ – 1/2 ಕಪ್ ಸಣ್ಣದಾಗಿ ಹೆಚ್ಚಿದ್ದು, ಟೊಮ್ಯಾಟೊ ಪೇಸ್ಟ್ – 1/2 ಕಪ್, ನೀರುಳ್ಳಿ – 1, ಬೆಳ್ಳುಳ್ಳಿ – 2 ಎಸಳು, ಹಸಿಮೆಣಸು – 3, ಶುಂಠಿ – 1/2 ಇಂಚು, ಎಣ್ಣೆ – 2 ಟೀ.ಸ್ಪೂ., ಸಾಸಿವೆ – 1/4 ಟೀ.ಸ್ಪೂ., ಬಿಳಿ ವಿನೆಗರ್ – 1/4 ಕಪ್, ಒಳ್ಳೆ ಮೆಣಸಿನ ಹುಡಿ – 1/2 ಟೀ.ಸ್ಪೂ., ಉಪ್ಪು – ರುಚಿಗೆ, ಕೊತ್ತಂಬರಿ ಸೊಪ್ಪು – 1/4 ಕಪ್ ಹೆಚ್ಚಿದ್ದು.

ಮಾಡುವ ವಿಧಾನ:

ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಅದಕ್ಕೆ ಸಾಸಿವೆ ಹಾಕಿ ಚಟಪಟಾಯಿಸಿ. ನಂತರ ನೀರುಳ್ಳಿ ಹಾಕಿ ಹುರಿಯಿರಿ. ನಸು ಕೆಂಬಣ್ಣಕ್ಕೆ ಬಂದಾಗ ಟೊಮ್ಯಾಟೋ ಹಾಕಿ ಹುರಿಯಿರಿ. ನಂತರ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ ಪೇಸ್ಟ್ ಹಾಕಿ ಹುರಿಯಿರಿ. ಅದಕ್ಕೆ ಟೊಮ್ಯಾಟೋ ಪೇಸ್ಟ್ ಹಾಕಿ ಉರಿ ಯನ್ನು ಸಣ್ಣದಾಗಿಸಿ. ವಿನೆಗರ್, ಉಪ್ಪು, ಒಳ್ಳೆ ಮೆಣಸಿನ ಹುಡಿ ಎಲ್ಲವನ್ನೂ ಹಾಕಿ ಕೈಯಾಡಿಸಿ. ಕುದಿ ಬಂದ ಬಳಿಕ ವಿೂನಿನ ತುಂಡುಗಳನ್ನು ಹಾಕಿ ತಿರುವಿ. ವಿೂನು ಬೆಂದ ಬಳಿಕ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಬಿಸಿ ಬಿಸಿ ಯಾಗಿಯೇ ಬಡಿಸಿರಿ.

ಸಾಂದರ್ಭಿಕ ಚಿತ್ರ

Leave a Reply