• ಬೇಕಾಗುವ ಸಾಮಗ್ರಿಗಳು:

ಮೊಟ್ಟೆಯ ಬಿಳಿ- 6
ಮೊಟ್ಟೆ ಹಳದಿ- 6
ಸಕ್ಕರೆ- 1 ಕಪ್
ಮೈದಾ- 1.1/2 ಕಪ್
ಉಪ್ಪು- 1 ಚಿಟಿಕೆ
ಎಣ್ಣೆ- 4 ಸ್ಪೂ.
ಹಾಲು- 4 ಸ್ಪೂ
ವೆನಿಲ- 1 ಸ್ಪೂ.

  • ತಯಾರಿಸುವ ವಿಧಾನ:

ಮೊಟ್ಟೆಯ ಬಿಳಿ ಮತ್ತು ಸಕ್ಕರೆಯನ್ನು ಬೀಟ್ ಮಾಡಿ. ಬಳಿಕ ಮೊಟ್ಟೆಯ ಹಳದಿಯನ್ನು ಸೇರಿಸಿ ಮಿಕ್ಸ್ ಮಾಡಿ. ಮೈದಾ, ಉಪ್ಪುಗಳನ್ನು ಮಿಕ್ಸ್ ಮಾಡಿ ನಂತರ ಎಣ್ಣೆ, ಹಾಲು, ವೆನಿಲವನ್ನು ಮಿಕ್ಸ್ ಮಾಡಿದ ಬಳಿಕ ಬೀಟ್ ಮಾಡಿದ ಮಿಶ್ರಣಕ್ಕೆ ಮಿಶ್ರ ಮಾಡಿ. ಓವನ್ 180 ಡಿಗ್ರಿ ಸೆಲ್ಸಿಯಸ್ 5-10 ನಿಮಿಷ ಫ್ರೀ ಹೀಟ್ ಮಾಡಿ. ಈ ಮಿಶ್ರಣ ಬೇಕಿಂಗ್ ಟನ್‍ಗೆ ಸುರಿದು ಫ್ರೀ ಹೀಟ್ ಮಾಡಿದ ಓವನಿನಲ್ಲಿ ಇಟ್ಟು 180 ಡಿಗ್ರಿ ಸೆಲ್ಸಿಯಸ್‍ನಲ್ಲಿ 30 ನಿಮಿಷ ಬೇಕ್ ಮಾಡಿ.

ವಿಪ್ಪಿಂಗ್ ಕ್ರೀಮ್- 1.1/2 ಕಪ್, ಸಕ್ಕರೆ ಪಾಕ- 3/4 ಕಪ್ ತಯಾರಿಸಿದ ಕೇಕ್ ತಣ್ಣಗಾದ ಬಳಿಕ ಕತ್ತರಿಸಿದ ಲೇಯರ್‍ಗಳು ಮಾಡಿದ ಬಳಿಕ ಪ್ರತಿಯೊಂದು ಲೇಯರಿಗೂ ಸಕ್ಕರೆ ಪಾಕ, ವಿಪ್ಪಿಂಗ್ ಕ್ರೀಮ್ ಎಂಬುದನ್ನು ಸೇರಿಸಿ ನಿಮ್ಮಿಷ್ಟದಂತೆ ಅಲಂಕರಿಸಿ.

Leave a Reply