ವಿಶ್ವದ ಸೂಪರ್ ಪವರ್ ರಾಷ್ಟ್ರಗಳಿಗೂ ಕೂಡ ಕರೋನಾ ಸಾಂಕ್ರಾಮಿಕ ಮಹಾಮಾರಿ ತೀವ್ರವಾಗಿ ಬಾಧಿಸಿದ್ದರೂ ಅವರ ಜಿಡಿಪಿ ಶೇಕಡಾ 10-15ಕ್ಕಿಂತ ಕಡಿಮೆಯಾಗಿಲ್ಲ. ಬ್ರಿಟನ್‌ನ ಜಿಡಿಪಿ ಕುಸಿತ ಶೇಕಡಾ 20 ರಷ್ಟು ಆಗಿದ್ದು, ನಾವು ಬ್ರಿಟನ್‌ನ್ನು ತುಂಬಾ ಹಿಂದಿಕ್ಕಿದ್ದೇವೆ. ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ ನಮ್ಮ ಕುಸಿತವು ಶೇಕಡಾ 23.9 ಆಗಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಟ್ಯಾಟಿಸ್ಟಿಕ್ಸ್‌ನ ಹೆಚ್ಚಿನ ಸಂಶೋಧನೆಯ ನಂತರ ಈ ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ. ಆದರೆ ಸಣ್ಣ ಹಳ್ಳಿಗಳಲ್ಲಿ ಸಣ್ಣ ಕೈಗಾರಿಕೆಗಳು ಮುಚ್ಚಲ್ಪಟ್ಟು ಉದ್ಯೋಗ ನಷ್ಟ ಆಗಿದೆ. ಸುಮಾರು ಕೋಟಿ ಜನರು ಮನೆಗಳಲ್ಲಿ ಕೂತಿದ್ದು, 2 ಕೋಟಿ ಉದ್ಯೋಗಗಳು ಕಳೆದುಹೋಗಿವೆ,ಈ ಅಂಕಿ ಅಂಶಗಳನ್ನು ಸೇರಿಸುತ್ತಿದ್ದರೆ ಈ ಸಂಸ್ಥೆಯ ಡಾಟಾ ಇನ್ನಷ್ಟು ಭಯಾನಕವಾಗಬಹುದು.
ಇದು ಆರ್ಥಿಕ ಕುಸಿತದ ಆರಂಭ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಮುಂದೆ ಏನಾಗುತ್ತದೆ ಮುಂದೆ ನಡೆಯುವ ಬೆಳವಣಿಗೆಯಿಂದಲೇ ನೋಡಲು ಸಾಧ್ಯ? ನಮ್ಮ ಆರ್ಥಿಕತೆಯು ಮುಂದಿನ ಕೆಲವು ತಿಂಗಳುಗಳಲ್ಲಿ ಇತರ ದೇಶಗಳಂತೆ ಚೇತರಿಸಿಕೊಳ್ಳಬಹುದು. ಕಳೆದ 40 ವರ್ಷಗಳಲ್ಲಿ ದೇಶವು ಇಷ್ಟೊಂದು ದೊಡ್ಡ ಮಟ್ಟದ ಆರ್ಥಿಕ ಕುಸಿತವನ್ನು ಕಂಡಿಲ್ಲ ಎಂಬುದನ್ನು ಅಂಕಿ ಅಂಶಗಳು ಜಿಡಿಪಿ ತೋರಿಸುತ್ತಿದೆ. ದೇಶದಲ್ಲಿ ಆರ್ಥಿಕ ಬಿಕ್ಕಟ್ಟಿನ ಭಾರೀ ಮೋಡಗಳು ಆವರಿಸುತ್ತಿವೆ. ಇದೇ ಅವಧಿಯಲ್ಲಿ ಕೃಷಿ 3.4 ರಷ್ಟು ಹೆಚ್ಚಾಗಿದೆ ಎಂಬುದು ತೃಪ್ತಿದಾಯಕ ವಿಷಯ. ಅಂದರೆ, ಭಾರತ ತನ್ನ ಹಸಿವನ್ನು ನೀಗಿಸಲು ಯಾರಿಗೂ ಕೈ ಚಾಚಬೇಕಾಗಿಲ್ಲ. ಆದರೆ ಹಣದ ಕೊರತೆಯು ಸಾಮಾನ್ಯ ಜನರಲ್ಲಿ ತುಂಬಾ ಸಾಮಾನ್ಯವಾಗಿದೆ. ಜನರ ಖರೀದಿ ಸಾಮರ್ಥ್ಯ ಶೇಕಡಾ 54.3 ರಷ್ಟು ಕುಸಿದಿವೆ.

ಮಾರುಕಟ್ಟೆಗಳು ತೆರೆದಿವೆ ಆದರೆ ಗ್ರಾಹಕರು ಎಲ್ಲಿದ್ದಾರೆ? ಕರೋನಾ ಪ್ರಕರಣಗಳು ಬೆಳೆಯುತ್ತಲೇ ಇವೆ. ಈಗ ಅದು ಹಳ್ಳಿಗಳಲ್ಲೂ ಹರಡುತ್ತಿದೆ. ಜನರು ಭಯದಿಂದ ಮನೆಗಳಲ್ಲಿ ಕೂರಬೇಕೋ ಹೊರ ಬರಬೇಕೋ ಎಂಬ ಆಲೋಚನೆ ಮಾಡುತ್ತಿದ್ದಾರೆ. ದೊಡ್ಡ ಕಾರ್ಖಾನೆಗಳು ಮತ್ತೆ ತೆರೆಯುತ್ತಿವೆ, ಆದರೆ ಅವರ ತಯಾರಿಸಿದ ವಸ್ತುಗಳನ್ನು ಯಾರು ಖರೀದಿಸುತ್ತಾರೆ? ತಮ್ಮ ಜಿಎಸ್‌ಟಿ ಮೊತ್ತಕ್ಕಾಗಿ ರಾಜ್ಯ ಸರ್ಕಾರಗಳು ಕೇಳುತ್ತಿವೆ.

ಕೇಂದ್ರ ಸರ್ಕಾರವು ದೇಶದ ದೀನದಲಿತರಿಗೆ ಮತ್ತು ಬಡವರಿಗೆ ಸ್ವಲ್ಪ ಪರಿಹಾರ ನೀಡಿದೆ, ಆದರೆ ಈ ಸಮಯದಲ್ಲಿ ದೇಶದಲ್ಲಿ ಖರೀದಿ ಹೆಚ್ಚಾಗುವಂತೆ ಹಣ ಜನರ ಕೈಗೆ ತಲುಪಬೇಕು. ಇದು ಬಿಕ್ಕಟ್ಟಿನ ಅತ್ಯಂತ ಅಪಾಯಕಾರಿ ಸಮಯ. ಈ ಬಿಕ್ಕಟ್ಟನ್ನು ಕೇಂದ್ರ ಸರಕಾರವು ಸೂಕ್ತ ಕ್ರಮಗಳೊಂದಿಗೆ ಪರಿಹರಿಸಬೇಕಾಗಿದೆ.

LEAVE A REPLY

Please enter your comment!
Please enter your name here