ಹೊಸದಿಲ್ಲಿ: ದ್ವಿಚಕ್ರವಾಹನಗಳಲ್ಲಿ ಪೆಟ್ರೋಲ್ ಇಂಜಿನಿಗೆ ಬದಲಾಗಿ ವಿದ್ಯುತ್ ಇಂಜಿನ್ ಹಾಕಿದರೆ ತೈಲಾಮದು ಕಡಿಮೆಗೊಳಿಸಬಹುದು ಮತ್ತು 1.2 ಲಕ್ಷ ಕೋಟಿರೂ. ಲಾಭ ಮಾಡಬಹುದು ಎಂದು ನೀತಿ ಆಯೋಗ ವರದಿ ಮಾಡಿದೆ.
” ಭಾರತದಲ್ಲಿ 170 ದಶಲಕ್ಷಕ್ಕೂ ಹೆಚ್ಚು ದ್ವಿಚಕ್ರವಾಹನಗಳಿವೆ. ಪ್ರತಿಯೊಂದು ದ್ವಿಚಕ್ರವಾಹನಗಳು ಒಂದು ದಇವಸಕ್ಕೆ ಅರ್ಧ ಲೀಟರಿಗೂ ಹೆಚ್ಚು ಪೆಟ್ರೋಲ್ ಉಪಯೋಗಿಸಿದರೆಇದು 34 ಬಿಲಿಯನ್ ಲೀಟರ್ವರೆಗೆಆಗಬಹುದು. ಲೀಟರ್ಗೆ70ರೂಪಾಯಿ ದರದಲ್ಲಿ ಪೆಟ್ರೋಲಿಗೆ 2.4ಲಕ್ಷಕೋಟಿ ರೂಪಾಯಿ ಆಗುತ್ತದೆ. ಶೇ.50 ಆಮದು ಮಾಡುವ ಇಂಧನದ ದರ ಸೇರಿಸಿದರೆ 1.2ಲ ಕ್ಷ ಕೋಟಿ ರೂಪಾಯಿಯ ಪೆಟ್ರೋಲ್ ಅಮದು ಮಾಡಿಕೊಳ್ಳುವ ಅಗತ್ಯವಿಲ್ಲ. ” ನೀತಿ ಆಯೋಗ ಹೊರಡಿಸಿದ ಝೀರೋ ಎಮಿಶನ್ ವೆಹಿಕಲ್ಸ್: ಟುವಾಡ್ರ್ಸ್ ಎಪಾಲಿಸಿ ಫೆಯಿಂವರ್ಕ್ ಎಂಬ ವರದಿಯಲ್ಲಿ ನೀತಿ ಆಯೋಗ್ ವಿವರಿಸಿದೆ.
ಮುಂದಿನ, ಐದು ಅಥವಾ ಏಳು ವರ್ಷಗಳಲ್ಲಿ ಈ ಗುರಿ ಸಾಧಿಸಬಹುದು. ಆದರೆ ಹೊಸ ತಂತ್ರಜ್ಞಾನದಲ್ಲಿ ಭಾರತ ಇತರ ದೇಶಗಳ ಜತೆ ಪೈಪೋಟಿಯಲ್ಲಿದೆ ಎನ್ನುವುದನ್ನು ತೋರಿಸಿಕೊಡಲು ಕೂಡ ಸಾಧ್ಯವಿದೆ. ಇಂತಹ ನೀತಿ ರೂಪಿಸುವ ಅಗತ್ಯವು ಇದೆ.
ಅದರಂತೆ ಹವಾಮಾನ ವೈಪರೀತ್ಯ ಎದುರಿಸಲು ದೇಶದಲ್ಲಿ ವಿದ್ಯುತ್ ವಾಹನಗಳನ್ನು ಪ್ರೋತ್ಸಾಸುವ ನೀತಿಯನ್ನು ಸ್ವೀಕರಿಸಬೇಕಾಗಿದೆ ಎಂದು ವರದಿ ಹೇಳಿದೆ. ಇದೇವೇಳೆಮೋದಿ ದೇಶದಲ್ಲಿ ಹವಮಾನ ವೈಪರೀತ್ಯ ತಡೆಯಲಿಕ್ಕಾಗಿ ವಿದ್ಯುತ್ ಚಾಲಿತ ವಾಹನಗಳನ್ನು ಪ್ರೋತ್ಸಾಹಿಸಲಾಗುವುದು ಎಂದಿದ್ದಾರೆ.
ವಾಹನಗಳು ಪೆಟ್ರೋಲಿನಿಂದ ವಿದ್ಯುತ್ಗೆ ಬದಲಾಗುವ ಮೂಲಕ ತೈಲ ಆಮದು ಕಡಿಮೆ ಮಾಡಿಕೊಳ್ಳಬಹುದು ಮತ್ತು ಖರ್ಚು ಕಡಿಮೆ ಆಗಿರುತ್ತದೆ ಎಂದು ವರದಿಗಳು ಬೆಟ್ಟು ಮಾಡಿವೆ.