ಐದು ತಿಂಗಳ ಹಿಂದೆ ವಾರಣಾಸಿಯಿಂದ ಕಾಣೆಯಾದ 3 ಪುಟ್ಟ ಮಕ್ಕಳನ್ನು ಹರ್ಯಾಣದ ಅಂಬಾಲಾದಲ್ಲಿ ಪತ್ತೆ ಹಚ್ಚಲಾಗಿದೆ. ವಾರಣಾಸಿ ಕ್ಯಾಂಟ್ ನಿಲ್ದಾಣದಿಂದ ಕಾಣೆಯಾಗಿದ್ದ ಈ ಮೂವರು ಮಕ್ಕಳನ್ನು ರಕ್ಷಿಸಿ ಅವರನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಈ ಮಕ್ಕಳು ದಾರಿ ತಪ್ಪಿ ಟ್ರೈನ್ ನಲ್ಲಿ ಅಂಬಾಲ (ಹರಿಯಾಣ) ತಲಪಿದ್ದರು. ಅಲ್ಲಿ ಗುಂಪೊಂದು ಅವರನ್ನು ಭಿಕ್ಷೆ ಬೇಡುವ ಕೆಲಸಕ್ಕೆ ನೇಮಿಸಿತ್ತು. ಈ ಪ್ರಕರಣದಲ್ಲಿ ಮೂವರು ಜನರನ್ನು ಬಂಧಿಸಲಾಗಿದೆ….

ಈ ಮಕ್ಕಳನ್ನು ಚೈಲ್ಡ್ ಲೈನ್ ನವರು ವಾರಣಾಸಿಗೆ ಕರಕೊಂಡು ಬಂದರು ಮತ್ತು ಅವರ ಹೆತ್ತವರ ಕೈಗೊಪ್ಪಿಸಿದರು. ಮಕ್ಕಳನ್ನು ಕಂಡು ಹೆತ್ತವರ ಆನಂದ ಹೇಳ ತೀರದು. ಮಕ್ಕಳನ್ನು ಕಂಡೊಡನೆ ಅವರನ್ನು ಅಪ್ಪಿ ಹಿಡಿದು ಬಹಳ ಸಮಯದವರೆಗೆ ಅತ್ತು ಬಿಟ್ಟರು. ಈ ಮೂವರು ರಾಜೇಂದ್ರ ಎನ್ನುವ ವ್ಯಕ್ತಿಯ ಮಕ್ಕಳಾಗಿದ್ದು, ಅವರು ರೈಲ್ವೆ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇವರು ಕಾಣೆಯಾಗಿದ್ದರು.

Leave a Reply