ದಕ್ಷಿಣ ಭಾರತದ ಸಿನೆಮಾಗಳು ಕೂಡ ಬಾಕ್ಸ್ ಆಫೀಸ್ ನಲ್ಲಿ ಬಹಳ ಚೆನ್ನಾಗಿ ಕಲೆಕ್ಷನ್ ಮಾಡುತ್ತಿದೆ. ಬಾಹುಬಲಿ, ಮಲಯಾಳಿ ಚಿತ್ರ ಲೂಸಿಫರ್ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡಿತ್ತು. ಖ್ಯಾತ ತಮಿಳು ನಟ ವಿಜಯ್ ಅಭಿನಯಿಸಿದ ಬಿಗಿಲ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಬಹುತೇಕ ಕೊಳ್ಳೆ ಹೊಡೆಯುತ್ತಿದೆ. ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾದ ಈ ಈ ಚಿತ್ರವು ಕೇವಲ ಐದೇ ದಿನಗಳಲ್ಲಿ 200 ಕೋಟಿ ರೂಪಾಯಿ ಗಳಿಸಿದೆ.

ತೆಲುಗಿನಲ್ಲಿ ಈ ಚಿತ್ರಕ್ಕೆ ನಿರೀಕ್ಷೆಗೆ ತಕ್ಕ ಪ್ರತಿಕ್ರಿಯೆ ಸಿಗದಿದ್ದರೂ ತಮಿಳುನಾಡಿನಲ್ಲಿ ಈ ಚಿತ್ರ ಬಹಳ ಹಿಟ್ ಆಗಿದೆ. ಚೆನ್ನೈ ನಗರದಲ್ಲಿ ಈ ಸಿನಿಮಾ ಮೊದಲ ದಿನದಲ್ಲೇ ಎರಡು ಕೋಟಿ ಗಳಿಸಿದರೆ ತಮಿಳುನಾಡಿನಲ್ಲಿ ಒಟ್ಟು 23 ಕೋಟಿ ಗಳಿಸಿದೆ. ಅಲ್ಲದೆ ವಿಶ್ವದಾದ್ಯಂತ ಮೊದಲ ದಿನ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ವಿಜಯ್ ಹಾಗೂ ನಿರ್ಮಾಪಕಿ ಅರ್ಚನಾ ಜೊತೆಯಾಗಿ ಮಾಡಿರುವ ಮೂರನೆಯ ಚಿತ್ರ ಬಿಗಿಲ್. ಈ ಹಿಂದೆ ತೆರಿ ಹಾಗೂ ಮರ್ಸಲ್ ನಲ್ಲಿ ಅವರು ಒಟ್ಟಿಗೆ ಕೆಲಸ ಮಾಡಿದ್ದರು. ಈ ಎರಡು ಚಿತ್ರಗಳು ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ನಯನತಾರ ನಾಯಕಿಯಾಗಿ ಮಿಂಚಿದ್ದಾರೆ.

LEAVE A REPLY

Please enter your comment!
Please enter your name here