ನಟಿ ದೀಪಿಕಾ ಪಡುಕೋಣೆ ಜೆಎನ್ಯು ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದಾರೆ. ಇದೀಗ ದೀಪಿಕಾ ಪಡುಕೋಣೆ ತಮ್ಮ ಮುಂಬರುವ ಚಲನ ಚಿತ್ರ ಚಪಕ್ ನಲ್ಲಿ ಆಸಿಡ್ ದಾಳಿಯಲ್ಲಿ ಬದುಕುಳಿದವಳ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಈ ಚಿತ್ರವನ್ನು ಮುಂದಿಟ್ಟು ದೀಪಿಕ ಸೋಶಿಯಲ್ ಎಕ್ಸ್ ಪೆರಿಮೆಂಟ್ ವಿಡಿಯೋ ಮಾಡಿದ್ದು, ಇದಕ್ಕೆ ಜನರು ಹೇಗೆ ಪ್ರತಿಕ್ರಿಯೆ ವ್ಯಕ್ತ ಪಡಿಸುತ್ತಾರೆ ಎಂಬುದರ ವಿಡಿಯೋ ಮಾಡಿದ್ದಾರೆ.ದೀಪಿಕಾ ಮುಂಬೈ, ಫ್ಲಿಯಾ ಮಾರುಕಟ್ಟೆ ಮತ್ತು ದಿನಸಿ ಅಂಗಡಿಗಳಲ್ಲಿ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಗುಪ್ತ ಕ್ಯಾಮೆರಾಗಳು ಅವರನ್ನು ಸೆರೆ ಹಿಡಿಯುತ್ತವೆ.

ನಾನು ಹೊರ ಹೋದಾಗ ಜನರು ನನ್ನನ್ನು ಗುರುತಿಸುತ್ತಾರೆ. ಆದರೆ ಕೆಲವೊಮ್ಮೆ ನಾನು ಮರೆಮಾಚಲು ಬಯಸುತ್ತೇನೆ ಎಂದು ವಿಡಿಯೋ ಆರಂಭದಲ್ಲಿ ಹೇಳುತ್ತಾರೆ.  ದೀಪಿಕಾ ಹೊರನಡೆದಾಗಲೆಲ್ಲಾ ಜನರು ಅವಳನ್ನು ಗುರುತಿಸುತ್ತಾರೆ. ಕೆಲವೊಮ್ಮೆ ನಾನು ಮರೆಮಾಡಲು ಬಯಸುತ್ತೇನೆ, ”ಎಂದು ಅವರು ವೀಡಿಯೊದ ಆರಂಭದಲ್ಲಿ ಹೇಳುತ್ತಾರೆ.

15 ನೇ ವಯಸ್ಸಿನಲ್ಲಿ ಆಸಿಡ್ ದಾಳಿಗೊಳಗಾಗಿದ್ದ ಲಕ್ಷ್ಮಿ ಅಗರ್ವಾಲ್ ಅವರ ನಿಜ ಜೀವನದ ಕಥೆಯಿಂದ ಚಪಕ್ ಸಿನೆಮಾ ಕಥೆ ಸ್ಫೂರ್ತಿ ಪಡೆದಿದೆ. ಈ ಚಿತ್ರವನ್ನು ಮೇಘನಾ ಗುಲ್ಜಾರ್ ನಿರ್ದೇಶಿಸುತ್ತಿದ್ದು ಜನವರಿ 10 ರಂದು ಬಿಡುಗಡೆಯಾಗಲಿದೆ.

ವಿಡಿಯೋ ನೋಡಿ

LEAVE A REPLY

Please enter your comment!
Please enter your name here