ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಜೆ ಏನ್ ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಅವರ ಸಿನೆಮಾ ಬಹಿಷ್ಕರಿಸುವುದಾಗಿ ಬಲಪಂಥೀಯರು ಕರೆ ಕೊಟ್ಟಿದ್ದರು. ಈ ಪರ ವಿರೋಧದ ಚರ್ಚೆಯ ಮಧ್ಯೆ ದೀಪಿಕಾ ರವರ ಸೋಶಿಯಲ್ ಮೀಡಿಯಾ ವರ್ಚಸ್ಸು ಹೆಚ್ಚಿರುವುದು ಬೆಳಕಿಗೆ ಬಂದಿದೆ. ಕೇವಲ ಎರಡೇ ದಿನದಲ್ಲಿ ಅವರ ಟ್ವಿಟರ್ ಫಾಲೋವರ್ಸ್ ಸಂಖ್ಯೆ ನಲ್ವತ್ತು ಸಾವಿರ ಹೆಚ್ಚಿದೆ. ಈ ಮೂಲಕ ಟ್ವಿಟರ್ ನಲ್ಲಿ ಅವರಿಗೆ 26.8 ದಶಲಕ್ಷ ಫಾಲೋವರ್ ಗಳಿದ್ದಾರೆ.

ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಜೆ ಏನ್ ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಅವರ ಅಕೌಂಟ್ ಬ್ಲಾಕ್ ಮಾಡುವ ಅಭಿಯಾನ ಕೆಲವರು ಕೈಗೊಂಡಿದ್ದರು. ಜೆಎನ್‌ಯು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿಅವರು ಪಾಲ್ಗೊಂಡಿರುವ ವಿಷಯ ವಿವಿಧ ದೇಶಗಳಲ್ಲೂ ಸಾಕಷ್ಟು ಚರ್ಚೆಯಾದ ಕಾರಣ ಟ್ವಿಟ್ಟರ್‌ನ ವರ್ಲ್ಡ್ ಟ್ರೆಂಡ್‌ನಲ್ಲಿ ದೀಪಿಕಾ ಪಡುಕೋಣೆ ಹ್ಯಾಷ್‌ಟ್ಯಾಗ್‌ 4ನೇ ಸ್ಥಾನ ಪಡೆದಿತ್ತು.

LEAVE A REPLY

Please enter your comment!
Please enter your name here