ಮಹಾರಾಷ್ಟ್ರ: ಥಾಣೆ (ಗ್ರಾಮೀಣ) ಜಿಲ್ಲೆಯ ನೂರಕ್ಕೂ ಹೆಚ್ಚು ಮಹಿಳಾ ಪೊಲೀಸರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಕರೆದು ಸಿನೆಮಾ ತೋರಿಸಿದ ವಿಶೇಷ ಘಟನೆ ವರದಿಯಾಗಿದೆ. ಅಧಿಕಾರಿಗಳ ಪ್ರಕಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಾಜಿ ರಾಥೋಡ್ ಅವರು ಭಯಂದರ್ ಪೊಲೀಸ್ ಠಾಣೆಯಲ್ಲಿರುವ ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ತಕ್ಷಣ ಕರ್ತವ್ಯಕ್ಕೆ ಕರೆದು ಮರ್ದಾನಿ -2 ಚಲನಚಿತ್ರದ ವಿಶೇಷ ಪ್ರದರ್ಶನಕ್ಕಾಗಿ ಮಲ್ಟಿಪ್ಲೆಕ್ಸ್‌ಗೆ ಕರೆದೊಯ್ದರು. ಏನಪ್ಪಾ ಅಂತಹ ಅರ್ಜೆಂಟ್ ಬುಲಾವ್ ಎಂದು ಪರಿಗಣಿಸಿ ಮಧ್ಯಾಹ್ನ ನೂರಕ್ಕೂ ಹೆಚ್ಚು ಮಹಿಳಾ ಕಾನ್ಸ್ಟೆಬಲ್ ಗಳು ಪೊಲೀಸ್ ಠಾಣೆಗೆ ತಲುಪಿದಾಗ ಅವರಿಗೆ ವರಿಷ್ಠಾಧಿಕಾರಿಯ ನಡೆ ಆಶ್ಚರ್ಯವನ್ನುಂಟು ಮಾಡಿತು.

ಮಹಿಳಾ ಪೋಲೀಸರ ಕಠಿಣ ಪರಿಶ್ರಮ ಮತ್ತು ಅವರ ಕೆಲಸ ಕರ್ತವ್ಯ ಬದ್ಧತೆಯನ್ನು ಗೌರವಿಸಿ ಈ ವಿಶೇಷ ಕಾರ್ಯಕರ್ಮ ಹಮ್ಮಿಕೊಳ್ಳಲಾಯಿತು. ಮಾತ್ರವಲ್ಲ ಮನೆ ಮತ್ತು ಕರ್ತವ್ಯದ ಮಧ್ಯೆ ಸಮತೋಲನ ಕಲ್ಪಿಸಲಿಕ್ಕಾಗಿ ಅವರಿಗೆ ವಿಶ್ರಾಂತಿ ನೀಡುವ ನಿಟ್ಟಿನಲ್ಲಿ ಹೀಗೆ ಮಾಡಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಠಾಣೆಗೆ ತಲಪಿದ ಮಹಿಳಾ ಪೊಲೀಸರಿಗೆ ಮೊದಲು ತಿಂಡಿ ತಿನಿಸು ನೀಡಲಾಯಿತು ಮತ್ತೆ ಚಿತ್ರ ಮಂದಿರಕ್ಕೆ ಕರೆದು ಕೊಂಡು ಹೋಗಲಾಯಿತು.

ಮರ್ದಾನಿ -2′ ಚಿತ್ರದಲ್ಲಿ, ನಟಿ ರಾಣಿ ಮುಖರ್ಜಿ ಶಿವಾನಿ ಶಿವಾಜಿ ರಾಯ್ ಪಾತ್ರದಲ್ಲಿ ನಟಿಸಿದ್ದು, ಮಕ್ಕಳ ಕಳ್ಳಸಾಗಣೆ ಮತ್ತು ಮಾದಕವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಸಂಘಟಿತ ಕ್ರಿಮಿನಲ್ ಗ್ಯಾಂಗ್ ವಿರುದ್ಧ ನಿರ್ಭೀತ ಪೊಲೀಸ್ ಅಧಿಕಾರಿಯಾಗಿ ಅವರು ಪಾತ್ರ ನಿರ್ವಹಿಸಿದ್ದಾರೆ.

LEAVE A REPLY

Please enter your comment!
Please enter your name here