ಭಾರತೀಯ ಸೇನೆಯಲ್ಲಿ ಮೂವತ್ತು ವರ್ಷ ಸೇವೆ ಮಾಡಿದ ನಿವೃತ್ತ ಯೋಧರೊಬ್ಬರನ್ನು ವಿದೇಶಿ ಎಂದು ಘೋಷಿಸಿದ ಘಟನೆ ನಡೆದಿದೆ. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಮತ್ತು ಸುಮಾರು ಮೂವತ್ತು ವರ್ಷಗಳ ಕಾಲ ಭಾರತದ ಗಡಿ ಕಾಯುವ ಮೂಲಕ ದೇಶ ಸೇವೆ ಮಾಡಿದ ಮಾಜಿ ಸೇನಾಧಿಕಾರಿ ಮುಹಮ್ಮದ್ ಸನಾವುಲ್ಲಾ ರನ್ನು ವಿದೇಶಿ ಎಂದು ಘೋಷಿಸಿದ ಅಸ್ಸಾಂ ಟ್ರಿಬ್ಯೂನಲ್, ಅವರನ್ನು ಅಕ್ರಮ ವಲಸಿಗರ ಬಂಧನ ಕೇಂದ್ರಕ್ಕೆ ಕಳುಹಿಸಿದೆ.
ಸೇನೆಯಲ್ಲಿ ಮೂವತ್ತು ವರ್ಷ ಸೇವೆ ಮಾಡಿದ ನನಗೆ ಈ ಸಮ್ಮಾನ ನೀಡಿರುವುದು ನನಗೆ ತುಂಬಾ ನೋವಾಗಿದೆ. ನಾನು ಭಾರತೀಯ ಮತ್ತು ಶಾಶ್ವತವಾಗಿ ಭಾರತದಲ್ಲೇ ನೆಲೆಸುವೆ ಎಂದು ಸನಾವುಲ್ಲಾ ನೋವು ತೋಡಿಕೊಂಡಿದ್ದಾರೆ.
ಮೊಹಮ್ಮದ್ ಸನಾಲ್ಲಾ ಅವರು 30 ವರ್ಷಗಳ ಸೇವೆಯ ನಂತರ ಸೈನ್ಯದಿಂದ ನಿವೃತ್ತರಾದಾಗ ಅಸ್ಸಾಂ ಪೊಲೀಸ್ ಗಡಿ ವಿಂಗ್ಗೆ ಉಪ-ಇನ್ಸ್ಪೆಕ್ಟರ್ ಆಗಿ ಸೇರಿದರು. 2008 ರಲ್ಲಿ ಅವರನ್ನು ಅಕ್ರಮ ವಲಸಿಗ ಎಂದು ಗುರುತಿಸಲಾಯಿತು.

“ಅವರನ್ನು ನಿನ್ನೆ ಸಂಜೆ ಪೊಲೀಸ್ ಠಾಣೆಗೆ ಬರಲು ಹೇಳಿದರು. ಅಲ್ಲಿಂದ ಅವರು ಹಿಂತಿರುಗಲಿಲ್ಲ ಮತ್ತು ಇಂದು [ಬುಧವಾರ] ಅವರು ಬಂಧನ ಕೇಂದ್ರಕ್ಕೆ ಕರೆದೊಯ್ದಿದ್ದಾರೆ ಎಂಬ ವಿಷಯ ತಿಳಿಯಿತು”ಎಂದು ಸನಾಲ್ಲಾಹ್ ಪತ್ನಿ ಸಾನಿಮಾ ಬೇಗಮ್ ಹೇಳಿದರು.
ದಾಖಲೆರಹಿತ ಶಂಕಿತ ವಲಸಿಗರನ್ನು ಪತ್ತೆಹಚ್ಚುವ ಜವಾಬ್ದಾರಿ ಹೊಂದಿರುವ ಗಡಿ ವಿಂಗ್ ಅಧಿಕಾರಿಯೊಬ್ಬರು, ಮೇ 23 ರಂದು ಸನಾವುಲ್ಲಾ ರನ್ನು ವಿದೇಶಿ ಎಂದು ಘೋಷಿಸಿದ್ದರು. ಗಡಿ ವಿಂಗ್ ಮುಖ್ಯಸ್ಥ ಭಾಸ್ಕರ್ ಜ್ಯೋತಿ ಮಹಂತ ಅವರು, ಸನಾವುಲ್ಲಾ ರನ್ನು ಉಪ-ಇನ್ಸ್ಪೆಕ್ಟರ್ ಹುದ್ದೆಯಿಂದ ವಜಾಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಅಸ್ಸಾಂನಲ್ಲಿ ಅಕ್ರಮ ವಲಸಿಗರನ್ನು ಸಂಶಯಿಸುವ ಇಂತಹ 100 ನ್ಯಾಯ ಮಂಡಳಿಗಳಿವೆ, ಇವುಗಳ ಮೂಲಕ ಪ್ರಕರಣವನ್ನು ಎದುರಿಸಲಾಗುತ್ತಿದೆ. ಕಳೆದ ವರ್ಷ ಜುಲೈನಲ್ಲಿ ಅಸ್ಸಾಂನಲ್ಲಿ ವಲಸಿಗರಿಗೆ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ನಾಲ್ಕು ಮಿಲಿಯನ್ ಜನರನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಯಿತು.

Leave a Reply