ಬೆಂಗಳೂರು: ಇಲ್ಲಿರುವ ಮಲಯಾಳಿ ಯುವತಿಯೋರ್ವಳನ್ನು ಕೇರಳದ ಮಲಪ್ಪುರಮ್ ನ ಯುವಕನೊಬ್ಬ ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರಗೈದು ವಂಚಿಸಿದ ಕುರಿತು ದೂರು ದಾಖಲಾಗಿದೆ.
ಯುವತಿ ಗರ್ಬಿಣಿಯಾದ ಬಳಿಕ ಯುವಕ ಅಜ್ಮಲ್ ಪರಾರಿಯಾಗಿದ್ದ. ಫೇಸ್ ಬುಕ್ ಮೂಲಕ ಹತ್ತಿರವಾಗಿ ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರಗೈದಿದ್ದ. ಆಕೆಯಿಂದ 1.7 ಲಕ್ಷ ರೂಪಾಯಿ ಮೊತ್ತವನ್ನು ಪಡೆದು ಪರಾರಿಯಾಗಿದ್ದ.
ಬಳಿಕ ಹಣ ಕೊಡುತ್ತೇನೆಂದು ಕರೆಯಿಸಿಕೊಂಡ ಆತ ಕೊಲ್ಲುವುದಾಗಿ ಬೆದರಿಸಿದ್ದ. ಈತನನ್ನು ಕೇರಳ ಪೋಲೀಸರು ಬಂಧಿಸಿದ್ದಾರೆ. ಕರ್ನಾಟಕ ಪೋಲೀಸರು ಕೂಡ ಹಣ ವಂಚಿಸಿದ್ದಕ್ಕಾಗಿ ಕೇಸು ದಾಖಲಿಸಿದ್ದಾರೆ.