ಸಾಮಾಜಿಕ ಜಾಲತಾಣದಲ್ಲಿ ಫೇಕ್ ಅಕೌಂಟ್ ಮಾಡಿ ಮೋಸ ಮಾಡುವ ದೊಡ್ಡ ಜಾಲವೇ ಇದೆ, ಆದ್ದರಿಂದ ಪರಿಚಯವೇ ಇಲ್ಲದವರ ನಡುವೆ ಸ್ನೇಹ ಬೆಳೆಸುತ್ತಾ, ಬಳಿಕ ಮೋಸ ಹೋದ ಅದೆಷ್ಟೋ ಯುವಕ ಯುವತಿಯರಿದ್ದಾರೆ.

ಕೊನೆಗೆ ಮಾನ ಬೀದಿಪಾಲಾದ ಅಥವಾ ಹಣ ಕಳಕೊಂಡ ಅದೆಷ್ಟೋ ಉದಾಹರಣೆ ಇದೆ. ಇದೀಗ ಬಿಜೆಪಿ ಕಾರ್ಯಕರ್ತೆಯ ಪೋಟೋ ಹಾಕಿ ಅಶ್ಲೀಲ ಚಿತ್ರಗಳನ್ನು ಅಪ್ಲೋಡ್​ ಮಾಡಿರುವ ವಿರುದ್ಧ ಕೇಸ್ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಲಾಗಿದೆ.
ಲೀನಾ ಎಸ್​ ಎಂ ಎಂಬುವವಳು ಫೇಸ್ಬುಕ್ ನಲ್ಲಿ ದುಷ್ಕರ್ಮಿಗಳು ಇಂತಹ ಕೃತ್ಯ ಎಸಗಿದ್ದು, ಅವರು ಸೈಬರ್​ ಕ್ರೈಂ ಮೊರೆ ಹೋಗಿದ್ದಾರೆ. ಈ ಫೇಕ್ ಅಕೌಂಟ್​ ಹೆಸರು ಶಂಕರ್​ ಮೆಡಾ ಮತ್ತು ವಿದ್ಯಾ ಎಂ ಕೆ ಎಂಬ ಹೆಸರಿನಲ್ಲಿದೆ. ಈ ಫೇಕ್​ ಅಕೌಂಟ್​ ಬಗ್ಗೆ ತನ್ನ ಸ್ನೇಹಿತರು ತಿಳಿಸಿದಾಗ ಕಾಮುಕರ ಕೃತ್ಯಅವರ ಗಮನಕ್ಕೆ ಬಂದಿದೆ.ಫೇಸ್ ಬುಕ್ ನಲ್ಲಿ ತಮ್ಮ ಪರ್ಸನಲ್ ಮಾಹಿತಿ ಫೋಟೋ ಶೇರ್ ಮಾಡುವವರು ಆದಷ್ಟು ಜಾಗ್ರತೆ ವಹಿಸಬೇಕು. ಯಾಕೆಂದರೆ ಕಾಮುಕರು ಆ ಫೋಟೋಗಳನ್ನು ದುರ್ಬಳಕೆ ಮಾಡಿ ಅವುಗಳನ್ನು ಯಾವುದೊ ಅಶ್ಲೀಲ, ಫೋಟೋ ವಿಡಿಯೋಗಳಿಗೆ ಎಡಿಟ್ ಮಾಡಿ ತಮ್ಮ ಕುಕೃತ್ಯವನ್ನು ಮೆರೆಯುತ್ತಾರೆ. ದ್ವೇಷಕ್ಕಾಗಿಯೂ ಹೀಗೆ ಮಾಡುವವರಿದ್ದಾರೆ. ಯಾವುದಕ್ಕೂ ಎಚ್ಚರಿಕೆ ವಹಿಸುವುದು ಒಳ್ಳೆಯದು.

 

Representational image

Leave a Reply