ಲಾಕ್ಡೌನ್ ಮತ್ತೊಮ್ಮೆ ನಮಗೆ ಮಾನವೀಯತೆಯ ಪಾಠವನ್ನು ನೀಡಿದೆ. ಲಾಕ್ ಡೌನ್ ಸಮಯದಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡಲು ಮುಂದೆ ಬರುವ ಅನೇಕ ಜನರು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ದಾನ ಮಾಡಿ ಮಹಾನರಾಗಿದ್ದಾರೆ.
ಮಂಗಳೂರಿನಲ್ಲಿ, ಕೃಷಿ ಕಾರ್ಮಿಕರಾಗಿರುವ ಅಬ್ದುರ್ರಹ್ಮಾನ್ ಗೂಡಿನಬಳಿ, ಮುಸ್ಲಿಮರ ಅತ್ಯಂತ ಪವಿತ್ರ ಧಾರ್ಮಿಕ ಯಾತ್ರೆ ಮಕ್ಕಾ ಮತ್ತು ಮದೀನಾ ಹಜ್ ಮಾಡುವ ಕನಸನ್ನು ಈಡೇರಿಸಲು ವರ್ಷಗಳಿಂದ ತಮ್ಮ ಹಣವನ್ನು ಕೂಡಿಟ್ಟಿದ್ದರು.

55 ವರ್ಷ ವಯಸ್ಸಿನವರು ಮುಂದಿನ ವರ್ಷ ಹಜ್ ಮಾಡಲು ತೀರ್ಮಾನಿಸಿದ್ದರು. ಆದರೆ COVID-19 ಸಾಂಕ್ರಾಮಿಕ ರೋಗದಿಂದಾಗಿ ಜೀವನೋಪಾಯವನ್ನು ಕಳೆದುಕೊಂಡವರಿಗೆ ಸಹಾಯ ಮಾಡುವ ಮೂಲಕ ದೇವರ ಸೇವೆ ಮಾಡಲು ಉತ್ತಮವಾದ ಮಾರ್ಗ ಯಾವುದು ಎಂದು ಯೋಚಿಸಿ ಆ ಹಣವನ್ನೆಲ್ಲ ಬಡಬಗ್ಗರಿಗೆ ನೀಡಿದ್ದಾರೆ.
ಅವರ ಮಗ ಹಾಕಿದ ಫೇಸ್ಬುಕ್ ಸ್ಟೇಟಸ್ ತುಂಬಾ ವೈರಲ್ ಆಗಿದೆ. ಮಾತ್ರವಲ್ಲ ಹಲವಾರು ರಾಷ್ಟ್ರೀಯ ಮಾಧ್ಯಮದಲ್ಲೂ ಅವರ ಸೇವೆ ವರದಿಯಾಗಿದೆ.

  1. https://www.indiatimes.com/trending/human-interest/farm-worker-in-karnataka-uses-his-haj-savings-to-feed-the-needy-during-lockdown
  2. https://timesofindia.indiatimes.com/city/mangaluru/karnataka-farm-worker-gives-up-haj-savings-to-feed-needy/articleshow/75368366.cmshttps://www.indiatimes.com/trending/human-interest/farm-worker-in-karnataka-uses-his-haj-savings-to-feed-the-needy-during-lockdown-511789.html
  3. https://www.younews.in/news/farm-worker-in-karnataka-uses-his-haj-savings-to-feed-the-needy-during-lockdown/
  4. https://thecognate.com/daily-wage-labourer-in-karnataka-gives-up-hajj-savings-to-feed-needy-in-coronavirus-lockdown/
  5. https://www.deccanherald.com/state/mangaluru/daily-wager-spends-money-saved-for-hajj-to-buy-food-for-the-needy-829853.html

“ನನ್ನ ತಂದೆಯವರು ಇವತ್ತಿಗೂ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ತಾಯಿಯವರದ್ದು ಇಂದಿಗೂ ಬೀಡಿ ಕಟ್ಟುವ ಕುಲಕಸುಬು. ಒಟ್ಟಿನಲ್ಲಿ ನನ್ನ ಹೆತ್ತವರು ಶ್ರಮಜೀವಿಗಳು. ಜೀವನದಲ್ಲಿ ಒಮ್ಮೆಯಾದರೂ ಹಜ್ಜ್ ಯಾತ್ರೆ ನಿರ್ವಹಿಸಬೇಕೆಂಬುವುದು ಮುಸಲ್ಮಾನನಾಗಿ ಹುಟ್ಟಿದ ಪ್ರತಿಯೊಬ್ಬರ ಮಹದಾಸೆಯಾಗಿರುತ್ತದೆ. ಅಂತೆಯೇ ನನ್ನ ಪಾಲಕರು ಆ ಮಹದಾಸೆಯ ಕನಸು ಕಾಣುತ್ತಾ ಒಂದಷ್ಟು ಹಣವನ್ನು ವರುಷಗಳಿಂದ ಕೂಡಿಟ್ಟಿದ್ದರು. ಕೊರೊಣದ ಹಿನ್ನೆಲೆಯಲ್ಲಿ ಲಾಕ್ಡವ್ನ್ ಆಗಿ ಜನಸಾಮಾನ್ಯರು ನರಳುತ್ತಿರುವ ಈ ಸಂದರ್ಭದಲ್ಲಿ ಕೂಡಿಟ್ಟ ಆ ಹಣವು ನಮಗೆ ಹಿಡಿಶಾಪ ಹಾಕಬಹುದೆಂದು ಮನಗಂಡು, ಆ ಹಣದಿಂದ ಹಸಿದ ಹೊಟ್ಟೆ ತಣಿಸುವ ತೀರ್ಮಾನವನ್ನು ಕೈಗೊಂಡರು. ಅಲ್ಹಮ್ದುಲಿಲ್ಲಾಹ್… ಶುದ್ಧ ಮನಸ್ಸಿನ ನನ್ನ ಮಾತಾಪಿತರಿಗೆ ಆರೋಗ್ಯಯುತ ಧೀರ್ಘಾಯುಷ್ಯವನ್ನು ಏಕ ಇಲಾಹನು ದಯಪಾಲಿಸಲಿ. ಆಮೀನ್ ಯಾ ರಬ್ಬಲ್ ಆಲಮೀನ್… ಈ ಬರಹ ಪ್ರಚಾರಕ್ಕಾಗಿ ಅಲ್ಲ, ಇತರರನ್ನು ಪ್ರೇರೇಪಿಸುವ ಸಲುವಾಗಿ”

Leave a Reply