representational image

ಚಿಕ್ಕಮಗಳೂರು: ನೆರೆ ಹಾವಳಿಯಿಂದ ಆಸ್ತಿ-ಪಾಸ್ತಿ ಕಳೆದುಕೊಂಡಿದ್ದು, ಸರಕಾರದಿಂದ ಯಾವುದೇ ಪರಿಹಾರ ಸಿಗಲಿಲ್ಲ ಎಂದು ಮನನೊಂದು ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಮೂಡಿಗೆರಿ ತಾಲೂಕಿನ ಕಳಸ ಸಮೀಪದ ಎಸ್.ಕೆ.ಮೇಗಲ್ ಗ್ರಾಮದಲ್ಲಿ ನಡೆದಿದೆ.

ಇವರು ವೃತ್ತಿಯಲ್ಲಿ ರೈತರಾಗಿದ್ದು ಚಂದ್ರೇಗೌಡ (55) ಎಂದು ಗುರುತಿಸಲಾಗಿದೆ. ಚಂದೇಗೌಡ ಅವರ ಅರ್ಧ ಎಕರೆ ಭತ್ತದ ಗದ್ದೆ ಮತ್ತು ಅರ್ಧ ಎಕರೆ ಕಾಫಿ ತೋಟ ನೆರೆಯಿಂದ ಹಾಳಾಗಿತ್ತು. ತೋಟ ಸರಿಪಡಿಸಲು ಕೈ ಸಾಲ ಮಾಡಿಕೊಂಡಿದ್ದರು. ಆದರೆ, ನೆರೆಗೆ ಸರಕಾರ ಯಾವುದೇ ಪರಿಹಾರ ನೀಡುತ್ತಿಲ್ಲ ಎಂದು ಮನನೊಂದು ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ.

LEAVE A REPLY

Please enter your comment!
Please enter your name here