ಬೆಳಗಾವಿ:  ರಾಮದುರ್ಗ ತಾಲೂಕಿನ 32 ವರ್ಷದ ರೈತ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು,
ಬರಗಾಲದಿಂದ ಬೆಳೆ ನಷ್ಟವಾದದ್ದರಿಂದ ಅವರು ಪರಿಸ್ಥಿತಿಗೆ ತಲಪಿದ್ದಾರೆ ಎಂದು ವರದಿಯಾಗಿದೆ.

ವೆಂಕನಗೌಡ ಲಕ್ಷ್ಮಣಗೌಡ ಪಾಟೀಲ್ ಎಂಬ ರೈತ ಮೃತಪಟ್ಟ ದುರ್ದೈವಿ. ರೈತ ಓಬಳಾಪುರ ಗ್ರಾಮದವರಾಗಿದ್ದು ತನ್ನ 12 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ತೀವ್ರ ನಷ್ಟವಾಗಿದ್ದರಿಂದ ನೊಂದು ಬೆಳೆಗಳಿಗೆ ಸಿಂಪಡಿಸಲೆಂದು ತಂದಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ರಾಮದುರ್ಗದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಿಂದ 3 ಲಕ್ಷ ರೂಪಾಯಿ ಮತ್ತು ಫೈನಾನ್ಸ್ ಸೊಸೈಟಿಯೊಂದರಿಂದ 50,000 ಸಾಲ ಪಡೆದುಕೊಂಡಿದ್ದರು. ಹೊರಗೆ ವ್ಯಕ್ತಿಗಳಿಂದ 1 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ. ಪಡೆದುಕೊಂಡಿದ್ದ ರೈತ ಸಾಲಕ್ಕೆ ಬಡ್ಡಿ ದಿನೇ ದಿನೇ ಹೆಚ್ಚಾಗುತ್ತಿದ್ದರಿಂದ ದಾರಿ ಕಾಣದೆ ಆತ್ಮಹತ್ಯೆ ಮಾಡಿದ್ದಾರೆ. ಬಡ ರೈತರಿಗೆ ಬಡ್ಡಿರಹಿತ ಸಾಲದ ವ್ಯವಸ್ಥೆ ಮಾಡುವುದು ಕಾಲದ ಬೇಡಿಕೆ ಆಗಿದೆ.

Leave a Reply