ತಂದೆ ತಾಯಿ ವಯಸ್ಸಾದಂತೆ ಕೆಲವೊಮ್ಮೆ ಮಕ್ಕಳಿಗೆ ಭಾರವಾಗ ತೊಡಗುತ್ತಾರೆ. ಇತ್ತೀಚಿಗೆ ವೃದ್ಧ ತಾಯಿಯನ್ನು ಮಗ ಮತ್ತು ಮೊಮ್ಮಗ ಹಿಂಸಿಸುವ ಬೆಳ್ತಂಗಡಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಮಾತ್ರವಲ್ಲ ತಂದೆ ಮಗನನ್ನು ಬಳಿಕ ಬಂಧಿಸಲಾಯಿತು. ಕೋವಿಡ್ ೧೯ ರಿಂದಾಗಿ ಮತ್ತೊಮ್ಮೆ ರಾಜ್ಯದ ಕೆಲವೆಡೆ ಲಾಕ್ ಡೌನ್ ಆಗಿದ್ದು ಜನರು ಹೊರಗೆ ಹೋಗಲು ಭಯ ಪಡುವಂತಾಗಿದೆ. ಕೋವಿಡ್ ನಿಂದಾಗಿ ಮಕ್ಕಳ ಹಿರಿಯರ ಕೂದಲು ಬೆಳೆದು ನಿಂತಿದೆ. ಮನೆಯಲ್ಲಿ ಕಟ್ ಮಾಡಿದರೂ ಸೆಲೂನ್ ನಲ್ಲಿ ಕಟ್ಟಿಂಗ್ ಮಾಡುವಷ್ಟು ಸರಿಯಾಗುತ್ತಿಲ್ಲ. ಆದರೂ ಸೆಲೂನ್ ಗೆ ಹೋಗಲು ಭಯ. ಈ ನಿಟ್ಟಿನಲ್ಲಿ ಹಾಸ್ಯನಟ ಶಿವರಾಜ್​ ಕೆ.ಆರ್​.ಪೇಟೆ ಅವರು ತನ್ನ ತಂದೆಗೆ ಮನೆಯಲ್ಲೇ ಶೇವಿಂಗ್​, ಕಟಿಂಗ್​ ಮಾಡಿದ್ದಾರೆ.

ಫೇಸ್​​ಬುಕ್​ನಲ್ಲಿ ತಾವು ತಮ್ಮ ತಂದೆಗೆ ಶೇವಿಂಗ್​ ಮಾಡುತ್ತಿರುವ ಫೋಟೋ ಅಪ್ಲೋಡ್​ ಮಾಡಿದ ಶಿವರಾಜ್​ ಅವರು, ನಾನು ಚಿಕ್ಕವನಿದ್ದಾಗ ನನ್ನ ಅಪ್ಪ ಹೇರ್ ಕಟಿಂಗ್​ ಮಾಡಿಸೋಕೆ ಅಂತ ಶಾಪ್​ಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಈಗ ನನಗೆ ಅವರನ್ನು ಶಾಪ್​ಗೆ ಕರೆದುಕೊಂಡು ಹೋಗಲು ಭಯ. ಹಾಗಾಗಿ ನಾನೇ ಮಾಡಿದೆ ಎಂದು ಪೋಸ್ಟ್​ ಹಾಕಿದ್ದಾರೆ. ಅವರ ಈ ಫೋಟೊ ತುಂಬಾ ವೈರಲ್ ಆಗಿದ್ದು ಜನರು ಹೆಚ್ಚು ಲೈಕ್ ಕೊಟ್ಟಿದ್ದು ತುಂಬಾ ಮಂದಿ ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here