ಬಿಹಾರ ರಾಜ್ಯದ ನಾವಡ ಎಂಬಲ್ಲಿ ಓರ್ವ ಯುವತಿಯನ್ನು ಮರಕ್ಕೆ ಕಟ್ಟಿ ಥಳಿಸುವ ಘಟನೆಯ ಫೋಟೋ ವೈರಲ್ ಆಗಿದೆ. ಊರ ಪಂಚಾಯಿತಿ ಆದೇಶದಂತೆ ಆಕೆಗೆ ಈ ಶಿಕ್ಷೆ ನೀಡಲಾಗಿದೆ.

ಏನಿದು ಅಮಾನವೀಯ ಘಟನೆ:

ಈ ಯುವತಿಯು ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿ ಓಡಿ ಹೋದದ್ದೇ ಮಹಾ ತಪ್ಪು ಎಂಬಂತೆ ಊರಿನ ಪಂಚಾಯಿತಿಯ ಆದೇಶದ ಮೇರೆಗೆ ಊರವರು ಮನ ಬಂದಂತೆ ಥಳಿಸಿದ್ದಾಗಿ ವರದಿಯಾಗಿದೆ. ಸೆ.30 ರಂದು ಯುವತಿ ಓಡಿ ಹೋಗಿದ್ದು ಪಕ್ಕದ ಊರಿನಲ್ಲಿ ಅನ್ಯ ಜಾತಿಯ ಯುವಕನೊಂದಿಗೆ ವಾಸವಾಗಿದ್ದಳು. ಆದರೆ ಇವರನ್ನು ಗ್ರಾಮಸ್ಥರು ಪತ್ತೆ ಹಚ್ಚಿ ಊರಿಗೆ ಕರೆತಂದು ಈ ರೀತಿ ವರ್ತಿಸಿದ್ದಾರೆ. ತಾನು ತನ್ನಷ್ಟದಂತೆ ಅನ್ಯ ಜಾತಿಯ ಯುವಕನೊಂದಿಗೆ ಹೋಗಿದ್ದೆ ಎಂದು ಆಕೆ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಪಂಚಾಯಿತಿ ನೀಡಿದ ಶಿಕ್ಷೆಯ ಆದೇಶಕ್ಕೆ ಯುವತಿಯ ಮನೆ ಮಂದಿಯವರು ಬೆಂಬಲ ನೀಡಿದ್ದು, ರಾಜೌಲಿ ಎಂಬ ಗ್ರಾಮದಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಮ್ಮ ಜಾತಿಯ ಹುಡುಗನನ್ನಲ್ಲದೆ ಬೇರೆ ಜಾತಿಯ ಹುಡುಗನೊಂದಿಗೆ ವಿವಾಹವಾಗಲು ನಾವು ಬಿಡುವುದಿಲ್ಲ. ಪಂಚಾಯಿತಿ ತೀರ್ಪು ಸರಿ ಇದೆಯೆಂದು ಯುವತಿಯ ತಂದೆ ಹೇಳಿದರು.

Leave a Reply