ಸಾಂಧರ್ಬಿಕ ಚಿತ್ರ

ಬಹುಪತ್ನಿಯರನ್ನು ಹೊಂದಿರುವ ವ್ಯಕ್ತಿಯ ಪತ್ನಿಯರ ಮಧ್ಯೆ ಗಲಾಟೆ ತಾರಕಕ್ಕೇರಿದ್ದು, ನಾಲ್ಕನೇ ಪತ್ನಿ ಮೂರನೇ ಪತ್ನಿಗೆ ಬೆಂಕಿಕೊಟ್ಟ ಘಟನೆ ವರದಿಯಾಗಿದೆ.

ಹೌಸಿಂಗ್ ಸೊಸೈಟಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುವ ಸಲೀಂ ಮೂರನೇ ಪತ್ನಿ ಇದ್ದಂತೆಯೇ ನಾಲ್ಕನೇ ಮದುವೆ ಆಗಿದ್ದಾರೆ. ನಾನು ಪತಿಯ ಜೊತೆ ಇರುತ್ತೇನೆ, ನೀನು ವಿಚ್ಛೇದನ ಕೊಡು ಎಂದು ಆಕೆಗೆ ಆಗಾಗ ಕಿರುಕುಳ ಕೊಡುತ್ತಿದ್ದಳು. ಆದರೆ ಮೂರನೇ ಪತ್ನಿ ಶಬ್ನಂ ನಿರಾಕರಿಸಿದ್ದಕ್ಕೆ ತನ್ನ ತಾಯಿಯ ಜೊತೆ ಸೇರಿ ಸೀಮೆ ಎಣ್ಣೆ ಸುರಿದು ಬೆಂಕಿ ಕೊಟ್ಟಿದ್ದಾಳೆ. ಶಬ್ನಂರಿಗೆ ಸುಟ್ಟ ಗಾಯಗಳಾಗಿದ್ದು ಆಕೆ ಗಂಭೀರ ಸ್ಥಿತಿಯಲ್ಲಿದ್ದಾರೆ.

ಪೊಲೀಸರು ದೂರು ದಾಖಲಿಸಿ ನಾಲ್ಕನೇ ಪತ್ನಿ ಆಯೆಷಾ ಮತ್ತು ತಾಯಿಯನ್ನು ವಶಕ್ಕೆ ಪಡೆದಿದ್ದಾರೆ.

Leave a Reply