ಭೋಪಾಲ್ಜೋ: ಷಿ ಬಾಬಾ ಅರಣ್ಯ ವ್ಯಾಪ್ತಿಯಲ್ಲಿ ಸುಮಾರು 15 ಮಂಗಗಳು ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಹತ್ತಿರದ ನೀರಿನ ಮೂಲವನ್ನು ಮಂಗದ ಗುಂಪೊಂದು ನಿಯಂತ್ರಿಸುತ್ತಿದ್ದು, ಈ ಗುಂಪಿನ ಮಂಗಗಳಿಗೆ ನೀರು ಕುಡಿಯಲು ಅನುಮತಿ ಕೊಡದ ಕಾರಣ 15 ಮಂಗಗಳು ಜೀವ ಬಿಟ್ಟಿದೆ.
ಸೋಂಕು ಹರಡದಿರಲೆಂದು ಸತ್ತ ಮಂಗಗಳನ್ನು ಸುಡಲಾಗುತ್ತಿದೆ. ನೀರು ಸಿಗದ ಕಾರಣ ಈ ಮಂಗಗಳು ಜೀವ ಬಿಟ್ಟಿದೆ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ. ದೇಶದಲ್ಲಿ ಮಳೆ ಬಾರದೆ ಜನರು ತತ್ತರಿಸಿ ಹೋಗಿದ್ದಾರೆ. ಬಿಸಿಲ ಬೇಗೆ ಪ್ರಾಣಿಗಳ ಜೀವಕ್ಕೂ ಕುತ್ತು ತರುತ್ತಿದ್ದು, ಪ್ರಾಣಿ ಪಕ್ಷಿಗಳು ಹೀಗೆ ನೀರಿಲ್ಲದೆ ಜೀವ ಬಿಡುವುದು ತುಂಬಾ ಬೇಸರದ ಸಂಗತಿ.

Leave a Reply