ಹೈದರಾಬಾದ್ ನಲ್ಲಿ ಭಿಕ್ಷುಕರನ್ನು ಗುರುತಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದವರಿಗೆ ತೆಲಂಗಾಣ ಜೈಲು ಇಲಾಖೆಯು 500 ರೂ. ನೀಡಲಿದೆ. ನಗರವನ್ನು ಭಿಕ್ಷುಕ ಮುಕ್ತಗೊಳಿಸಲು ಈ ಹೆಜ್ಜೆಯನ್ನು ತೆಗೆದುಕೊಳ್ಳಲಾಗಿದೆ ಎಂದು ತೆಲಂಗಾಣ ಜೈಲು ಇಲಾಖೆಯ ವಿ.ಕೆ. ಸಿಂಗ್ ಹೇಳಿದ್ದಾರೆ.
ಭಿಕ್ಷುಕರಿಗೆ ಶಿಕ್ಷಣ ಮತ್ತು ಉದ್ಯೋಗವನ್ನು
ಒದಗಿಸುವ ನಿಟ್ಟಿನಲ್ಲಿ ‘ವಿದ್ಯಾದಾನ ಕಾರ್ಯಕ್ರಮ’ವನ್ನು ಪ್ರಾರಂಭಿಸಿದ್ದು, ಈ ಮೂಲಕ ನಗರವನ್ನು ಭಿಕ್ಷುಕ ಮುಕ್ತ ಗೊಳಿಸುವುದು ಇದರ ಉದ್ದೇಶ ಆಗಿದೆ. ಆನಂದ ಆಶ್ರಮದಲ್ಲಿ ಭಿಕ್ಷುಕರಿಗೆ ಶಿಕ್ಷಣ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.
ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೋರೇಷನ್ ಮತ್ತು ಪೊಲೀಸ್ ಇಲಾಖೆಯ ಸಹಾಯದಿಂದ, 741 ಪುರುಷ ಭಿಕ್ಷುಕರು ಮತ್ತು 311 ಮಹಿಳಾ ಭಿಕ್ಷುಕರನ್ನು ಈಗಾಗಲೇ ತರಬೇತಿಗಾಗಿ ರಸ್ತೆಗಳಿಂದ ರಕ್ಷಿಸಲಾಗಿದೆ. ಅವರಲ್ಲಿ ಕೆಲವರನ್ನು ನಿಗಾದ ಮೇಲೆ ಬಿಡುಗಡೆಗೊಳಿಸಲಾಗಿದೆ.
265 ಪುರುಷ ಭಿಕ್ಷುಕರು 70 ಸ್ತ್ರೀ ಭಿಕ್ಷುಕರು ಮತ್ತು 2 ಮಕ್ಕಳು ಆನಂದ್ ಆಶ್ರಮದಲ್ಲಿ ತರಬೇತಿ ಪಡೆಯುತ್ತಿದ್ದಾರೆ.