ರಸ್ತೆಯಲ್ಲಿ ಮೋಟಾರು ವಾಹನದಲ್ಲಿ ಸಂಚರಿಸುವಾಗ ಟ್ರಾಫಿಕ್ ಪೊಲೀಸರು ಬಹುತೇಕ ನಮ್ಮೆಲ್ಲರನ್ನು ಕೆಲವೊಮ್ಮೆ ನಿಲ್ಲಿಸಿಯೇ ಇರುತ್ತಾರೆ. ಕೆಲವೊಮ್ಮೆ ಇದು ನಮಗೆ ತುಂಬಾ ಉಪದ್ರವದಂತೆ ಕಾಡುತ್ತದೆ. ಟ್ರಾಫಿಕ್ ಪೊಲೀಸರು ನಿಮ್ಮನ್ನು ತಡೆದರೆ ನೀವು ಚಿಂತಿಸಬೇಕಾಗಿಲ್ಲ. ಸಂಚಾರ ಪೊಲೀಸರು ನಿಲ್ಲಿಸಿದಾಗ ನಮಗೂ ಕೆಲವು ಅಗತ್ಯವಾದ ಹಕ್ಕುಗಳಿವೆ. ಅವನ್ನು ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಈ ಹಕ್ಕನ್ನು ತಿಳಿದುಕೊಳ್ಳಿ:
ಚಲನ್ ಪುಸ್ತಕ ಅಥವಾ ಇ-ಚಲನ್ ಅವರೊಂದಿಗೆ ಇರುವುದರಿಂದ ಟ್ರಾಫಿಕ್ ಪೊಲೀಸರು ನಿಮ್ಮ ಮೇಲೆ ಯಾವುದೇ ರೀತಿಯ ದಂಡವನ್ನು ವಿಧಿಸುವುದು ಅವಶ್ಯಕ. ಟ್ರಾಫಿಕ್ ಪೊಲೀಸರೊಂದಿಗೆ ಚಲನ್ ಇಲ್ಲದಿದ್ದರೆ ಅವರು ನಿಮ್ಮ ಮೇಲೆ ಯಾವುದೇ ದಂಡ ಅಥವಾ ಫೈನ್ ವಿಧಿಸಲು ಸಾಧ್ಯವಿಲ್ಲ. ಚಲನ್ ಇಲ್ಲದೆ ದಂಡ ವಸೂಲಿ ಮಾಡಲು ನೋಡಿದರೆ ಅಂತವರ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿ.

ನೀವು ಶಾಂತವಾಗಿರಬೇಕು ಮತ್ತು ಹಾಜರಿದ್ದ ಅಧಿಕಾರಿಗೆ ಸರಿಯಾಗಿ ನಿಮ್ಮ ಸಮಸ್ಯೆ ಬಗ್ಗೆ ಹೇಳಲು ಪ್ರಯತ್ನಿಸಬೇಕು. ನೀವು ತಪ್ಪು ಮಾಡಿದ್ದರೆ ತಪ್ಪಿನ ಕಾರಣವನ್ನು ವಿವರಿಸಲು ಪ್ರಯತ್ನಿಸಿ. ಅಧಿಕಾರಿ ನಿಮ್ಮ ಬಗ್ಗೆ ಸರಿಯಾಗಿ ಭಾವಿಸಿದರೆ ನಂತರ ಅವರು ಯಾವುದೇ ದಂಡವಿಲ್ಲದೆ ನಿಮ್ಮನ್ನು ಬಿಡಬಹುದು.

ಪೊಲೀಸ್ ಅಧಿಕಾರಿಯೊಬ್ಬರು ನಿಮ್ಮನ್ನು ತಡೆದಾಗಲೆಲ್ಲಾ ಅವರು ಮೊದಲು ಕಾಗದ ಮತ್ತು ಚಾಲನಾ ಪರವಾನಗಿಯನ್ನು ನೋಡಲು ಕೇಳುತ್ತಾರೆ. ಈ ಡಾಕ್ಯುಮೆಂಟ್ ಅನ್ನು ಪೊಲೀಸ್ ಅಧಿಕಾರಿಗೆ ತೋರಿಸುವುದು ನಿಮ್ಮ ಕರ್ತವ್ಯವಾಗಿದೆ. ಆದರೆ ಅವರು ನಿಮ್ಮ ಡಾಕ್ಯುಮೆಂಟ್ ಅನ್ನು ಅವರೊಂದಿಗೆ ಇಟ್ಟುಕೊಳ್ಳುವ ಅಧಿಕಾರ ಅವರಿಗಿಲ್ಲ ಎಂಬುದನ್ನು ನೆನಪಿನಲ್ಲಿಡಿ.

ಇದನ್ನು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 130 ರಲ್ಲಿ ಹೇಳಲಾಗಿದೆ:
ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 130 ರ ಅಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಚಾಲಕನು ಸಮವಸ್ತ್ರ ಹೊಂದಿರುವ ಪೊಲೀಸ್ ಅಧಿಕಾರಿಗೆ ಪರವಾನಗಿ ತೋರಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಆ ಅಧಿಕಾರಿ ನಿಮಗೆ ಕೆಂಪು ದೀಪ ವಿದ್ದಾಗ ವಾಹ ಓಡಿಸಿದ್ದಕ್ಕಾಗಿ, ನೋ ಪಾರ್ಕಿಂಗ್ ನಲ್ಲಿ ವಾಹನ ನಿಲುಗಡೆ ಮಾಡಿದ್ದಕ್ಕೆ, ಮದ್ಯಪಾನ ಮಾಡಿದ್ದಕ್ಕೆ, ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಿದ್ದಕ್ಕಾಗಿ, ವಾಹನದೊಳಗೆ ಸಿಗರೇಟ್ ಸೇದಿದ್ದಕ್ಕೆ, ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದ್ದಕ್ಕೆ, ಪರವಾನಗಿ ಇಲ್ಲದೆ ವಾಹನ ಚಲಾಯಿಸಿದ್ದಕ್ಕೆ, ನಂಬರ್‌ ಪ್ಲೇಟ್‌ಗಳನ್ನು ಮರೆಮಾಚಿದ್ದಕ್ಕೆ, ಸರಿಯಾದ ವಿಮೆ ಹೊಂದಿರದಿದ್ದಕ್ಕಾಗಿ, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು ಹೊಂದಿರದಿದ್ದಕ್ಕಾಗಿ, ನೋಂದಣಿ ಇಲ್ಲದೆ ವಾಹನವನ್ನು ಓಡಿಸಿದ್ದಕ್ಕಾಗಿ ದಂಡ ವಿಧಿಸಬಹುದು.

ನೀವು ನೋಂದಣಿ ಇಲ್ಲದೆ ವಾಹನ ಚಲಾಯಿಸುತ್ತಿದ್ದರೆ ಅಥವಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುತ್ತಿದ್ದರೆ, ನಿಮ್ಮ ವಾಹನವನ್ನು ವಶಕ್ಕೆ ತೆಗೆದುಕೊಳ್ಳುವ ಹಕ್ಕು ಪೊಲೀಸರಿಗೆ ಇದೆ. ಯಾವುದೇ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯ ಅಕ್ರಮ ಬೇಡಿಕೆಗಳನ್ನು ನೀವು ಸ್ವೀಕರಿಸಬೇಕಾಗಿಲ್ಲ. ಟ್ರಾಫಿಕ್ ಪೊಲೀಸರಿಗೆ ಲಂಚ ನೀಡಲು ಪ್ರಯತ್ನಿಸಬೇಡಿ. ಅವರ ಹೆಸರು ಮತ್ತು ಬಕ್ಕಲ್ ಸಂಖ್ಯೆಯನ್ನು ಕೇಳಿ. ಅಧಿಕಾರಿ ಬಕಲ್ ಧರಿಸದಿದ್ದರೆ ಅವರ ಗುರುತಿನ ಚೀಟಿಯನ್ನು ನೋಡುವ ಹಕ್ಕು ನಿಮಗೆ ಇರುತ್ತದೆ. ಆ ಪೊಲೀಸ್ ಅಧಿಕಾರಿ ಹಾಗೆ ಮಾಡಲು ನಿರಾಕರಿಸಿದರೆ ನಿಮ್ಮ ವಾಹನದ ಡಾಕ್ಯುಮೆಂಟ್ ಅನ್ನು ಅವನಿಗೆ ತೋರಿಸದಿರಲು ನಿಮಗೆ ಹಕ್ಕಿದೆ.

ನಿಮ್ಮ ಚಾಲನಾ ಪರವಾನಗಿಯನ್ನು ಮುಟ್ಟುಗೋಲು ಹಾಕಿಕೊಂಡರೆ ಪೊಲೀಸರು ನಿಮಗೆ ರಶೀದಿ ನೀಡುತ್ತಾರೆ. ನೀವು ಕೆಂಪು ದೀಪವಿದ್ದಾಗ ವಾಹನ ಚಲಾಯಿಸುವಾಗ, ವಾಹನವು ಓವರ್‌ಲೋಡ್ ಆಗಿರುವಾಗ, ನೀವು ಕುಡಿದು ವಾಹನ ಚಲಾಯಿಸುತ್ತಿರುವಾಗ ಮತ್ತು ಚಾಲನೆ ಮಾಡುವಾಗ ಮೊಬೈಲ್ ಅನ್ನು ಬಳಸಿದರೆ ನಿಮ್ಮ ಚಾಲಾನಾ ಪರವಾನಗಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು.

ನಿಮ್ಮ ವಾಹನದಲ್ಲಿ ನೀವು ಕುಳಿತು ಕೊಂಡಿರುವವರೆಗೂ ಪೊಲೀಸರು ಅದನ್ನು ವಿಂಚಿಂಗ್ ವಾಹನದ ಮೂಲದ ಅದನ್ನು ಎಳೆಯುವಂತಿಲ್ಲ. ವಾಹನವನ್ನು ಎಳೆಯುವ ಮೊದಲು ಅವರು ಅದನ್ನು ಖಾಲಿ ಮಾಡಬೇಕು. ನೀವು ಅಪರಾಧದಲ್ಲಿ ಸಿಕ್ಕಿಹಾಕಿಕೊಂಡರೆ, 24 ಗಂಟೆಗಳ ಒಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗುವುದು ಕಡ್ಡಾಯವಾಗಿದೆ.

ಪ್ರಾಸಿಕ್ಯೂಷನ್ ಸ್ಲಿಪ್ ಅಥವಾ ಚಲನ್ ನೀಡಿದರೆ, ಈ ವಿಷಯಗಳು ಅದರಲ್ಲಿವೆ ಎಂಬುದನ್ನು ನೆನಪಿನಲ್ಲಿಡಿ-

ಪ್ರಕರಣ ಎಲ್ಲಿಗೆ ಹೋಗುತ್ತದೆ ಎಂದು ನ್ಯಾಯಾಲಯದ ಹೆಸರು ಮತ್ತು ವಿಳಾಸ, ಅಪರಾಧದ ವಿವರಗಳು, ಪ್ರಕರಣದ ದಿನಾಂಕ, ವಾಹನ ವಿವರಗಳು, ಅಪರಾಧಿಯ ಹೆಸರು ಮತ್ತು ವಿಳಾಸ, ಚಲನ್ ಮಾಡಿದ ಅಧಿಕಾರಿಯ ಹೆಸರು ಮತ್ತು ಸಹಿ, ಸಲ್ಲಿಸಿದ ದಾಖಲೆಗಳ ವಿವರಗಳು.

LEAVE A REPLY

Please enter your comment!
Please enter your name here