ಸೂರತ್ : ಗುಜರಾತ್ ರಾಜ್ಯದ ಸೂರತ್ ಜಿಲ್ಲೆಯ ಕೋಚಿಂಗ್ ಸೆಂಟರ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಈ ದುರಂತದಲ್ಲಿ ಸುಮಾರು 19  ಮಂದಿ ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಜೀವ ಉಳಿಸಿ ಕೊಳ್ಳುವುದಕ್ಕೋಸ್ಕರ ಕೆಲವು ವಿದ್ಯಾರ್ಥಿಗಳು ನಾಲ್ಕು ಮಹಡಿಯ ಕಟ್ಟಡದಿಂದ ಜಿಗಿದಿದ್ದಾರೆ ಎಂದು ತಿಳಿದು ಬಂದಿದೆ.
ಮಕ್ಕಳು ಸುಮಾರು 14  ರಿಂದ 17  ವಯಸ್ಸಿನ ಆಸು ಪಾಸಿನವರಾಗಿದ್ದು, ಕೆಲವು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದೊಂದು ಕಮರ್ಷಿಯಲ್ ಬಿಲ್ಡಿಂಗ್ ಎಂದು ಹೇಳಲಾಗಿದ್ದು, ಮಕ್ಕಳು ಜೀವ ವುಳಿಸಲು ಹಾರಿದ ಪರಿಣಾಮವಾಗಿ ಕೆಲವರ ಜೀವ ಹೋಗಿದೆ ಎಂದು ವರದಿ ತಿಳಿಸಿದೆ. ಈ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

Leave a Reply